ಬೆಳಗಾವಿ: ಇಂದು ಯುಗಾದಿ ಹಬ್ಬ. ಹೊಸ ಯುಗದ ಆರಂಭ. ಎಲ್ಲರ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಆದ್ರೆ ಇಂತಹ ಹಬ್ಬದ ದಿನದಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಯಿಂದ ಸೇವಂತಾ ಹರದಾರೆ(90) ಮಹಾರಾಷ್ಟ್ರದ ಕೊಲ್ಹಾಪುರ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಹಬ್ಬದ ದಿನದಂದೇ ಸಚಿವೆ ಶಶಿಕಲಾ ಜೊಲ್ಲೆಗೆ ಮಾತೃ ವಿಯೋಗ ಉಂಟಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸೇವಂತಾ ಹರದಾರೆಯವರು ಕೆಲ ದಿನಗಳಿಂದ ಮಹಾರಾಷ್ಟ್ರದ ಕೊಲ್ಹಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.
ನನ್ನ ಜೀವನದ ಪ್ರೇರಣಾ ಶಕ್ತಿ, ಪ್ರತಿ ಯಶಸ್ಸಿನ ಏಳು-ಬೀಳಿನಲ್ಲೂ ಸದಾ ನನ್ನೊಂದಿಗಿರುತ್ತಿದ್ದ ದಾರಿದೀಪ, ನನ್ನನ್ನು ರೂಪಿಸಿದ ಮಾತೃಶ್ರೀ ಅವರು ಇಂದು ನಮ್ಮೊಂದಿಗಿಲ್ಲ. ವಯೋಸಹಜ ಅನಾರೋಗ್ಯದಿಂದಾಗಿ ಮಾತೃಶ್ರೀ ಶ್ರೀಮತಿ ಸೇವಂತಾ ಹರದಾರೆ (90) ಅವರು ಇಂದು ದೈವಾಧೀನರಾಗಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಟ್ವೀಟ್ ಮಾಡಿದ್ದು ತನ್ನ ತಾಯಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
ನನ್ನ ಜೀವನದ ಪ್ರೇರಣಾ ಶಕ್ತಿ, ಪ್ರತಿ ಯಶಸ್ಸಿನ ಏಳು-ಬೀಳಿನಲ್ಲೂ ಸದಾ ನನ್ನೊಂದಿಗಿರುತ್ತಿದ್ದ ದಾರಿದೀಪ, ನನ್ನನ್ನು ರೂಪಿಸಿದ ಮಾತೃಶ್ರೀ ಅವರು ಇಂದು ನಮ್ಮೊಂದಿಗಿಲ್ಲ. ವಯೋಸಹಜ ಅನಾರೋಗ್ಯದಿಂದಾಗಿ ಮಾತೃಶ್ರೀ ಶ್ರೀಮತಿ ಸೇವಂತಾ ಹರದಾರೆ (90) ಅವರು ಇಂದು ದೈವಾಧೀನರಾಗಿದ್ದಾರೆ.
1/2 pic.twitter.com/jDevtVmJW6— Shashikala Jolle (Modi Ka Parivar) (@ShashikalaJolle) April 13, 2021