Breaking News

ಈ ಹಿಂದೆ ಬಲವಂತದ ಹೇಳಿಕೆ ನೀಡಿದ್ದೇನೆ. ಹೀಗಾಗಿ ನನಗೆ ಮತ್ತೆ ಹೇಳಿಕೆ ನೀಡಲು ಅವಕಾಶ ಮಾಡಿಕೊಡಬೇಕು: ಸಿಡಿ ಯುವತಿ?

Spread the love

ಬೆಂಗಳೂರು: ಇಂದು ಎಸ್‍ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಲು ಮುಂದಾದ ಸಿಡಿ ಯುವತಿ ಇದೀಗ ಮತ್ತೆ ಸಮಯಾವಕಾಶ ಕೇಳಿದ್ದಾರೆ.

ವಕೀಲರು ಬಂದು ಹೇಳಿಕೆ ಕೊಡದಂತೆ ಒತ್ತಾಯ ಹೇರಿದ್ದಾರೆ. ಹೀಗಾಗಿ ನಾನು ಇಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲ್ಲ ಎಂದು ಹೇಳುವ ಮೂಲಕ ಯುವತಿ ಮತ್ತೆ ಸಮಯಾವಕಾಶ ಕೇಳಿದ್ದಾರೆ.

ಎಸ್‍ಐಟಿ ಮುಂದೆ ಯುವತಿ ಹೇಳಿದ್ದೇನು?:
ನಾನು ಮಾಡದ ತಪ್ಪಿಗೆ ನಾನು ಶಿಕ್ಷೆ ಅನುಭವಿಸಿದ್ದು, ಒತ್ತಾಯ ಪೂರ್ವಕವಾಗಿ ಹೇಳಿಕೆ ಕೊಡಿಸಿದರು. ನಂಬಿದವರಿಂದಲೇ ನಾನು ಮೋಸ ಹೋಗಿದ್ದೇನೆ. ನನ್ನ ಮರ್ಯಾದೆ ಹಾಳಾಗಿದ್ದು, ಪ್ರಕರಣ ಇಷ್ಟರ ಮಟ್ಟಿಗೆ ಆಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ನ್ಯಾಯ ಸಿಗುವ ನಿರೀಕ್ಷೆ ಇತ್ತು, ಆದ್ರೆ ನನಗೆ ಗೊತ್ತಿಲ್ಲದೆ ಕೆಲವೊಂದು ವಿಚಾರಗಳು ನಡೆಯಿತು. ನನ್ನ ಬೆನ್ನ ಹಿಂದೆ ನಡೆದ ವಿಚಾರ ತಿಳಿದುಕೊಳ್ಳೋದಕ್ಕೆ ಸಾಕಷ್ಟು ದಿನಗಳೇ ಆಯಿತು. ನನ್ನ ಸ್ನೇಹಿತ ಆಕಾಶ್ ಗೆ ಕೂಡ ಕೆಲವೊಂದು ವಿಚಾರ ಮುಚ್ಚು ಮರೆ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾರೆ ಎನ್ನಲಾಗಿದೆ.

ಅಪ್ಪ-ಅಮ್ಮನಿಗೂ ಕೂಡ ನಾನು ನೋವು ನೀಡಿದ್ದೇನು. ಒಳ್ಳೆಯ ಮಗಳಾಗಬೇಕು ಅಂತ ನನ್ನ ಅಪ್ಪ ನಿರೀಕ್ಷೆ ಮಾಡಿದ್ದರು. ನನ್ನನ್ನು ಕೂಡ ಕೆಲವೊಮ್ಮೆ ದೂರ ಇಟ್ಟು ಮಾತುಕತೆ ಮಾಡಿರುವ ಬಗ್ಗೆ ಅನುಮಾನ ಇದೆ. ಆದರೆ ನಿಜವಾಗಲೂ ಅನ್ಯಾಯಕ್ಕೆ ಒಳಗಾದವಳು ನಾನು ಮಾತ್ರ. ನಾನು ಸತ್ಯವನ್ನು ಮಾತ್ರ ಹೇಳಬೇಕೆಂದು ಬಯಸಿದ್ದೀನಿ. ನನ್ನ ಈ ಹೇಳಿಕೆಗಳಿಗೆ ನಾನು ಬದ್ಧವಾಗಿರ್ತೀನಿ ಎಂದು ಯುವತಿ ಎಸ್‍ಐಟಿ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ