Breaking News

5ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ : ಇಂದು 8 ಗಂಟೆಯವರೆಗೆ ಸಂಚರಿಸಿದ ಸಾರಿಗೆ ಬಸ್ ಗಳು ಎಷ್ಟು ಗೊತ್ತಾ.?

Spread the love

ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಇಂದಿಗೆ 5ನೇ ದಿನಕ್ಕೆ ಕಾಲಿಟ್ಟಿದೆ. 6ನೇ ವೇತನ ಆಯೋಗ ಶಿಫಾರಸ್ಸು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ, ಇಂದು ಕೂಡ ಸಾರಿಗೆ ನೌಕರರು ಅನಿರ್ಧಿಷ್ಟಾವಧಿಯ ಮುಷ್ಕರ ಮುಂದುವರೆಸಿದ್ದಾರೆ. ಇಂತಹ ಸಾರಿಗೆ ನೌಕರರ ಮುಷ್ಕರದಿಂದಾಗಿ ರಾಜ್ಯಾಧ್ಯಂತ ಸಾರಿಗೆ ಬಸ್ ಸಂಚಾರ ಕೂಡ ವಿರಳವಾಗಿದೆ. ಯುಗಾದಿ ಹಬ್ಬಕ್ಕೆ ತೆರಳುತ್ತಿರುವಂತ ನೌಕರರು ಬಸ್ ಗಳಿಲ್ಲದೇ ಪರದಾಡುವಂತ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಇದರ ಮಧ್ಯೆ 8 ಗಂಟೆಯವರೆಗೆ ವಿವಿಧ ನಿಗಮಗಳಿಂದ ಒಟ್ಟು 820 ಸಾರಿಗೆ ಬಸ್ ಸಂಚರಿಸಿವೆ.

ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಮಾಹಿತಿ ನೀಡಿದ್ದು, ಇಂದು 8 ಗಂಟೆಯವರೆಗೆ ರಾಜ್ಯಾಧ್ಯಂತ KSRTC 393 ಬಸ್, BMTC 95 ಬಸ್, NEKRTC 249 ಬಸ್, NWKRTC 83 ಬಸ್ ಸೇರಿದಂತೆ ಒಟ್ಟು 820 ಬಸ್ ಗಳು ಸಂಚಾರ ಆರಂಭಿಸಿರುವುದಾಗಿ ತಿಳಿಸಿದೆ.

ಅಂದಹಾಗೇ, ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ನಿನ್ನೆ ರಾತ್ರಿ 10ರಿಂದ ಬೆಂಗಳೂರು ಸೇರಿದಂತೆ 8 ನಗರಗಳಲ್ಲಿ ಕೊರೋನಾ ಕರ್ಪ್ಯೂ ಜಾರಿಗೊಳಿಸುತ್ತಿದೆ. ಇದರ ಮಧ್ಯೆಯೂ ಅಗತ್ಯ ಸೇವೆ ಒದಗಿಸುತ್ತಿರುವಂತ ಸಾರಿಗೆ ಸಂಚಾರಕ್ಕೂ ಅನುಮತಿಸಲಾಗಿದೆ. ಸಾರಿಗೆ ಬಸ್ ಪ್ರಯಾಣಿಕರು ತೆರಳೋದಕ್ಕೆ ಟಿಕೆಟ್ ತೋರಿಸೋದು ಕಡ್ಡಾಯವಾಗಿದೆ. ಇದಕ್ಕಾಗಿ ಕೊರೋನಾ ಕರ್ಪ್ಯೂ ಮಾರ್ಗಸೂಚಿ ಕ್ರಮಗಳನ್ನು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ