ಬೆಳಗಾವಿ: ‘ನೀವು ಅಧಿಕಾರದ ಅವಧಿ ಪೂರೈಸುತ್ತೀರಿ. ಚಿಂತೆ ಬಿಡಿ. ಬಳಿಕ ರಾಜ್ಯಪಾಲ, ಉಪ ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಆಗುತ್ತೀರಿ’ ಎಂದು ತಾಲ್ಲೂಕಿನ ಹಲಗಾದ ಸಿದ್ಧಸೇನಾ ಮುನಿ ಅವರು ತಮ್ಮ ಬಳಿಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಂಗಳವಾರ ಆಶೀರ್ವಾದ ಮಾಡಿದರು.
‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಹೇಳಿ’ ಎಂದು ಯಡಿಯೂರಪ್ಪ ಕೇಳಿದಾಗ ಪ್ರತಿಕ್ರಿಯಿಸಿದ ಮುನಿ, ’40 ಸಾವಿರ ಮತಗಳ ಅಂತರದಿಂದ ಮಂಗಲಾ ಅಂಗಡಿ ಗೆಲ್ಲುತ್ತಾರೆ’ ಎಂದು ಭವಿಷ್ಯ ನುಡಿದರು.
ದಿವಂಗತ ಸುರೇಶ ಅಂಗಡಿ ಅವರು ಮಾಡಿದ್ದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಜೈನ ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.
ಕೆಲವು ದಿನಗಳ ಹಿಂದೆ ತಮ್ಮನ್ನು ಭೇಟಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ, ‘ನೀವು ಮುಖ್ಯಮಂತ್ರಿ ಆಗುತ್ತೀರಿ’ ಎಂದು ಆಶೀರ್ವದಿಸಿದ್ದರು.
Laxmi News 24×7