Breaking News

ಬಿಸಿಲಿಗೆ ಗೂಡಿನಿಂದೆದ್ದ ಹೆಜ್ಜೇನು; ಉಪಪ್ರಾಚಾರ್ಯ, ವಿದ್ಯಾರ್ಥಿಗಳು ಸೇರಿ 10 ಜನ ಆಸ್ಪತ್ರೆಗೆ ದಾಖಲು

Spread the love

ಬಾಗಲಕೋಟೆ: ಬೇಸಿಗೆಯ ಝಳ ಈಗಾಗಲೇ ಎಲ್ಲರನ್ನೂ ಕಂಗೆಡಿಸಲಾರಂಭಿಸಿದೆ. ದಿನೇ ದಿನೇ ಹೆಚ್ಚುತ್ತಿರುವ ಸೂರ್ಯನ ತಾಪಮಾನ ಮೈ ಸುಡುತ್ತಿದೆ. ಸೂರ್ಯನ ಶಾಖ ಮನುಷ್ಯ ಮಾತ್ರರಿಗಷ್ಟೇ ಅಲ್ಲದೇ ಪ್ರಾಣಿ, ಪಕ್ಷಿ, ಕೀಟ ಸಂಕುಲಗಳ ಮೇಲೂ ಪರಿಣಾಮ ಬೀರುತ್ತಿದೆ. ಬಾಗಲಕೋಟೆ ಜಿಲ್ಲೆಯ ಗಮಖಂಡಿಯಲ್ಲಿ ಬಿಸಿಲಿನ ತಾಪ ತಾಳಲಾರದೆ ಗೂಡಿನಿಂದ ಎದ್ದ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಜಮಖಂಡಿ ನಗರದ ಸರ್ಕಾರಿ ಪಿಬಿ ಪ್ರೌಢಶಾಲೆ ಬಳಿ ಘಟನೆ ನಡೆದಿದ್ದು ಉಪಪ್ರಾಚಾರ್ಯರು ಹಾಗೂ 9 ವಿದ್ಯಾರ್ಥಿಗಳು ಹೆಜ್ಜೇನು ದಾಳಿಗೆ ತುತ್ತಾಗಿದ್ದಾರೆ.

ಘಟನೆಯ ವಿವರ:
ಜಮಖಂಡಿಯ ಸರ್ಕಾರಿ ಪಿಬಿ ಪ್ರೌಢಶಾಲೆ ಆವರಣದಲ್ಲಿರುವ ಮರಗಳಲ್ಲಿ ಹೆಜ್ಜೇನು ಗೂಡು ಕಟ್ಟಿಕೊಂಡಿದ್ದವು. ಆದರೆ, ಇಂದು ಬೆಳಗ್ಗೆ ಬಿಸಿಲಿನ ತಾಪ ತಾಳಲಾರದೇ ಗೂಡುಬಿಟ್ಟು ಎದ್ದ ಹೆಜ್ಜೇನುಗಳು ಎಲ್ಲರನ್ನೂ ಗಲಿಬಿಲಿಗೊಳಿಸಿವೆ. ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಆಗಮಿಸುವ ಹೊತ್ತಿಗೆ ಸರಿಯಾಗಿ ದಾಳಿ ನಡೆಸಿದ ಹೆಜ್ಜೇನುಗಳು ಓರ್ವ ಉಪಪ್ರಾಚಾರ್ಯ ಮತ್ತು 9 ವಿದ್ಯಾರ್ಥಿಗಳನ್ನು ಗಾಯಗೊಳಿಸಿವೆ.

ಹೆಜ್ಜೇನು ದಾಳಿಯಿಂದ ಕಂಗಾಲಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಗಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮುತ್ತಿಗೆ ಹಾಕಿದ ಹೆಜ್ಜೇನುಗಳು ಉಪಪ್ರಾಚಾರ್ಯ ಎನ್.ಬಿ.ಬಿರಾದಾರ ಹಾಗೂ 6 ವಿದ್ಯಾರ್ಥಿಗಳು, 3 ವಿದ್ಯಾರ್ಥಿನಿಯರು ಸೇರಿ ಒಟ್ಟು 10 ಜನರನ್ನು ಕಚ್ಚಿವೆ. ಹೆಜ್ಜೇನು ಕಡಿತಕ್ಕೆ ಒಳಗಾದವರಿಗೆ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ಘಟನೆಯಿಂದ ಗಾಬರಿಯಾಗಿರುವ ಪೋಷಕರು ಹಾಗೂ ಸುತ್ತಲಿನ ಜನರು ನಡು ಬೇಸಿಗೆಯಲ್ಲಿ ಹೆಜ್ಜೇನು ಹೀಗೆ ಮತ್ತೆ ಮತ್ತೆ ದಾಳಿಯಿಟ್ಟರೆ ಏನು ಗತಿಯೆಂದು ಚಿಂತಿಸುತ್ತಿದ್ದಾರೆ.

ಜಮಖಂಡಿ ಸರ್ಕಾರಿ ಆಸ್ಪತ್ರೆ ಮತ್ತು ವಿದ್ಯಾರ್ಥಿಗಳು

ಶಾಲೆಯ ಬಳಿ ಇದ್ದ ಮರದಲ್ಲಿ ಕಟ್ಟಿರುವ ಹೆಜ್ಜೇನು ಗೂಡು


Spread the love

About Laxminews 24x7

Check Also

ಕಳ್ಳರನ್ನು ಓಡಿಸಲು ದಿಟ್ಟತನ ಮೆರೆದ ಮಹಿಳೆ ಪೃಥ್ವಿ ಸಮಯ ಪ್ರಜ್ಞೆಯಿಂದ ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನು ಓಡಿಸಿದ ಮಹಿಳೆ…!!!

Spread the love ಕಳ್ಳರನ್ನು ಓಡಿಸಲು ದಿಟ್ಟತನ ಮೆರೆದ ಮಹಿಳೆ ಪೃಥ್ವಿ ಸಮಯ ಪ್ರಜ್ಞೆಯಿಂದ ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ