Breaking News

ದಾರಿತಪ್ಪಿದ ತಾಯಿ-ಮಗಳು: ದೈಹಿಕ ಶಿಕ್ಷಕನೊಂದಿಗೆ ಅಕ್ರಮ ಸಂಬಂಧ – ಪ್ರಿಯಕರನೊಂದಿಗೆ ಸೇರಿ ಘೋರಕೃತ್ಯ

Spread the love

ದಾವಣಗೆರೆ: ದೈಹಿಕ ಶಿಕ್ಷಕನೊಬ್ಬನ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ ತಾಯಿ-ಮಗಳು ಬುದ್ಧಿವಾದ ಹೇಳಿದ ತಂದೆಯನ್ನು ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

70 ವರ್ಷದ ಮಂಜಪ್ಪ ಕೊಲೆಯಾದ ವ್ಯಕ್ತಿ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದ ಮಂಜಪ್ಪ ಅವರ ಪುತ್ರಿ ಉಷಾ ಗಂಡನ ತೊರೆದು ಮಗಳು ಸಿಂಧು ಜೊತೆಗೆ ತಂದೆಯ ಮನೆಯಲ್ಲಿ ವಾಸವಾಗಿದ್ದಳು. ಈ ನಡುವೆ ಉಷಾ ಅದೇ ಊರಿನ ದೈಹಿಕ ಶಿಕ್ಷಕನಾಗಿರುವ ಇಬ್ಬರು ಮಕ್ಕಳ ತಂದೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ.

ಈ ಸಲುಗೆಯಿಂದ ಆಕೆಯ ಮಗಳು ಕೂಡ ಶಿಕ್ಷಕನೊಂದಿಗೆ ಸಂಬಂಧ ಬೆಳೆಸಿದ್ದಾಳೆ. ಈ ವಿಚಾರ ತಿಳಿದ ಮಂಜಪ್ಪ ಮಗಳು ಮತ್ತು ಮೊಮ್ಮಗಳಿಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಅವರು ಮಂಜಪ್ಪನನ್ನು ಕೊಲೆ ಮಾಡಲು ನಿರ್ಧರಿಸಿದ್ದಾರೆ.

15 ದಿನಗಳ ಹಿಂದೆ ಜಮೀನಿನಲ್ಲಿದ್ದ ಮಂಜಪ್ಪನ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ ಮೃತದೇಹವನ್ನು ನಾಲೆಗೆ ಎಸೆದಿದ್ದಾರೆ. ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ಬಿಂಬಿಸಿದ್ದಾರೆ. ಮೃತದೇಹದ ಮೇಲೆ ಗಾಯದ ಗುರುತುಗಳಿರುವುದನ್ನು ಗಮನಿಸಿದ ಹೊನ್ನಾಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಗಳು, ಮೊಮ್ಮಗಳು, ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದೆಲ್ಲಾ ವಿಚಾರ ಗೊತ್ತಾಗಿದ್ದು, ಮೂವರನ್ನು ಬಂಧಿಸಲಾಗಿದೆ.


Spread the love

About Laxminews 24x7

Check Also

ಬೆಳಗಾವಿ: ಕೈಲಾಸಕ್ಕೆ ಕರೆದೊಯ್ಯುವ ನಂಬಿಕೆ, ದೇಹತ್ಯಾಗಕ್ಕೆ ಮುಂದಾದ ಕುಟುಂಬ; ಅಧಿಕಾರಿಗಳಿಂದ ತಡೆ

Spread the loveಚಿಕ್ಕೋಡಿ (ಬೆಳಗಾವಿ): ಇಂದಿನ ಆಧುನಿಕ ದಿನಗಳಲ್ಲೂ ಕುಟುಂಬವೊಂದು ಆಶ್ರಮವೊಂದರ ಚಿಂತನೆಗಳನ್ನು ಅನುಕರಿಸಿ ದೇಹತ್ಯಾಗಕ್ಕೆ ಮುಂದಾದ ಘಟನೆ ಜಿಲ್ಲೆಯ ಅಥಣಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ