ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ.
ಸಿಡಿಯಲ್ಲಿದ್ದ ಯುವತಿಯ ರೂಮ್ ನಲ್ಲಿ ಬರೋಬ್ಬರಿ 23 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ನಿನ್ನೆ ಸಂಜೆ ಎಸ್‌ಐಟಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ 23 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಇಷ್ಟೊಂದು ನಗದು ಹೇಗೆ ಬಂತು ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.
ನರೇಶ್ ಮನೆಯಲ್ಲಿ ಶೋಧಿಸಿದಾಗ 18.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಿದ ಬಿಲ್ ಪತ್ತೆಯಾಗಿದೆ. ಅವರು ಬಳಸಿದ ಲ್ಯಾಪ್ಟಾಪ್ ಮತ್ತು ಪೆನ್ ಡ್ರೈವ್ ಗಳು ಕೂಡ ದೊರೆತಿದ್ದು ಅವುಗಳ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಯುವತಿಗೆ 3 ಸಲ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿಲ್ಲ. ವಿಡಿಯೋ ಹೇಳಿಕೆ ಬಿಡುಗಡೆ ನಂತರ ಆಕೆ ನಾಪತ್ತೆಯಾಗಿದ್ದು, ಅವರ ಪೋಷಕರು ಮಗಳನ್ನು ಅಪಹರಣ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ವಿವಿಧ ಆಯಾಮಗಳಿಂದ ತನಿಖೆ ಮುಂದುವರೆದಿದೆ.
https://youtu.be/kyxoU5IIGfs
Laxmi News 24×7