Breaking News

‘ರಾಜ್ಯದಲ್ಲಿ ಉಚಿತ ಮರಳು ನೀತಿ ತರಲು ಚಿಂತನೆ ನಡೆಸಿದ್ದೇವೆ’: ಸಚಿವ ನಿರಾಣಿ

Spread the love

ಬೆಂಗಳೂರು: ಗಣಿಗಾರಿಕೆ ವಿಚಾರವಾಗಿ ಭ್ರಷ್ಟಾಚಾರ ನಡೆಯುತ್ತಿರುವುದು ಸತ್ಯ ಎಂದು ವಿಧಾನಪರಿಷತ್​ನಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಒಪ್ಪಿಕೊಂಡಿದ್ದಾರೆ. ಗಣಿ ಮಾಲೀಕರ ಬಳಿ ಹಫ್ತಾ ವಸೂಲಿ ಮಾಡ್ತಿರುವುದೂ ಸತ್ಯ. ಗಣಿ & ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಹಫ್ತಾ ವಸೂಲಿ ನಡೆಯುತ್ತಿದೆ. ಆದರೆ, ಇಲಾಖೆಗೆ ನಾನು ಬಂದ ನಂತರ ಹಫ್ತಾ ನೀಡದಂತೆ ಸೂಚನೆ ಕೊಟ್ಟಿದ್ದೇನೆ. ಹಫ್ತಾ ನೀಡದಂತೆ ಗಣಿ ಮಾಲೀಕರಿಗೆ ಸೂಚನೆ ನೀಡಿದ್ದೇನೆ ಎಂದು ನಿರಾಣಿ ಹೇಳಿದರು. ಅಧಿಕಾರಿ ಎಷ್ಟೇ ಪ್ರಭಾವಿ ಆಗಿದ್ರೂ ಲಂಚ ನೀಡದಂತೆ ತಾಕೀತು ಮಾಡಿದ್ದೇನೆ. ಜೊತೆಗೆ, ಲಂಚ ಕೇಳುವ ಅಧಿಕಾರಿಗಳ ವಿವರ ನೀಡಲು ಗಣಿ ಮಾಲೀಕರಿಗೆ ನನ್ನದೇ ಮೊಬೈಲ್ ನಂಬರ್ ನೀಡಿದ್ದೇನೆ ಎಂದು ಹೇಳಿದರು.

ಗಣಿಗಾರಿಕೆಗೆ ಪರವಾನಗಿ ಸಿಗುವುದು ಸಾಕಷ್ಟು ಸಮಸ್ಯೆ ಇದೆ. ಇದನ್ನು ಸರಳೀಕರಣ ಮಾಡಲು ಹೊಸ ಗಣಿ ನೀತಿ ಜಾರಿ ಮಾಡುತ್ತೇವೆ. ರಾಜ್ಯದ ಎಲ್ಲ ಕಂದಾಯ ವಿಭಾಗದಲ್ಲೂ ಗಣಿ ಅದಾಲತ್ ಜಾರಿಯಾಗಲಿದೆ. ಪರವಾನಗಿ ನೀಡಲು ಏಕಗವಾಕ್ಷಿ ಯೋಜನೆ ಜಾರಿಗೆ ತರ್ತೇವೆ. ಗಣಿಗಾರಿಕೆ ನಡೆಸುವವರಿಗೆ ತರಬೇತಿ ಕೇಂದ್ರ ಆರಂಭಿಸುತ್ತೇವೆ ಎಂದು ಪರಿಷತ್​ನಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಹೇಳಿದರು.

‘ರಾಜ್ಯದಲ್ಲಿ ಉಚಿತ ಮರಳು ನೀತಿ ತರಲು ಚಿಂತನೆ ನಡೆಸಿದ್ದೇವೆ’
ರಾಜ್ಯದಲ್ಲಿ ಉಚಿತ ಮರಳು ನೀತಿ ತರಲು ಚಿಂತನೆ ನಡೆಸಿದ್ದೇವೆ ಎಂದು ಪರಿಷತ್​ನಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಹೇಳಿದ್ದಾರೆ. 10 ಲಕ್ಷಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವವರಿಗೆ ಸರ್ಕಾರವೇ ಉಚಿತವಾಗಿ ಮರಳು ಪೂರೈಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಗಣಿ ವಿಚಾರದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಉಗ್ರ ಕ್ರಮ ಜರುಗಿಸಲಾಗುವುದು. ಚಿಕ್ಕಬಳ್ಳಾಪುರ ತಾಲೂಕಿನ ಹಿರೇನಾಗವಲ್ಲಿ ಸ್ಫೋಟ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಪರಿಷತ್​ನಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಹೇಳಿದರು.

‘ಎಷ್ಟು ಗಣಿ ಮಾಲೀಕರು ಕಾನೂನು ಪ್ರಕಾರ ಗಣಿಗಾರಿಕೆ ಮಾಡ್ತಾರೆ?’
ಇದಕ್ಕೂ ಮುಂಚೆ, ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಚಿಕ್ಕಬಳ್ಳಾಪುರದ ಗಣಿಗಾರಿಕೆ ಘಟನೆ ಮೊದಲ ಕೇಸ್ ಅಲ್ಲ. ಹಿಂದೆ ಶಿವಮೊಗ್ಗದಲ್ಲೂ ಈ ಘಟನೆ ನಡೆದಿತ್ತು. ಆ ವೇಳೆ ನಾವು ಸರ್ಕಾರಕ್ಕೆ ಸಾಕಷ್ಟು ಎಚ್ಚರಿಕೆ ಕೊಟ್ಟು ಸರಿಯಾದ ಕ್ರಮ ಕೈಗೊಳ್ಳುವಂತೆ ಹೇಳಿದ್ವಿ. ಆದ್ರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮನಸ್ಸು ಮಾಡಿಲ್ಲ. ಮುಂದೆ ಚಿಕ್ಕಬಳ್ಳಾಪುರದಲ್ಲಿ ದುರಂತ ನಡೆದುಹೋಯ್ತು. ಅಮಾಯಕ ಕಾರ್ಮಿಕರು ಸಾವನ್ನಪ್ಪಿದರು. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

ಚಿಕ್ಕಬಳ್ಳಾಪುರದಲ್ಲಿ ಅನೇಕ ಕಲ್ಲು ಗಣಿಗಳು ಇವೆ. ಇವುಗಳಲ್ಲಿ ಎಷ್ಟು ಗಣಿ ಮಾಲೀಕರು ಕಾನೂನು ಪ್ರಕಾರ ಗಣಿಗಾರಿಕೆ ಮಾಡ್ತಾರೆ? ಈ ಬಗ್ಗೆ ‌ಸ್ಪಷ್ಟತೆ ಬೇಕು. ಕೈಯಿಂದ ಕಲ್ಲು ಹೊಡೆಯುವ ಸ್ಥಳಗಳಲ್ಲಿ ಸ್ಫೋಟ ಮಾಡಿ ಗಣಿಗಾರಿಕೆ ಮಾಡ್ತಾರೆ. ಇಲಾಖೆಯಲ್ಲಿ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕೆಲಸ ಮಾಡ್ತಾಯಿದ್ದಾರೆ. ಒಂದೇ ತಿಂಗಳ ಅಂತರದಲ್ಲಿ ಎರಡು ಅವಘಡ ನಡೆದಿದೆ ಎಂದು ನಾರಾಯಣಸ್ವಾಮಿ ಹೇಳಿದರು.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ