ಕರ್ನಾಟಕ, ಕನ್ನಡಿಗರ ವಿರುದ್ಧವೇ
ನಾಡದ್ರೋಹಿ ಚಟುವಟಿಕೆ ನಡೆಸುವ
ಶಿವಸೇನೆಗೆ ಕರ್ನಾಟಕದ ನೆಲದಲ್ಲಿಯೇ
ಕಾರ್ಯಾಲಯ ನಡೆಸಲು ಅವಕಾಶ
ಮಾಡಿಕೊಡುವದು ಎಷ್ಟು ಸರಿ?
ನಮ್ಮ ವಿರುದ್ಧವೇ ಪಿತೂರಿ
ನಡೆಸುವ ಇಂಥ ಸಂಘಟನೆಯ
ವಾಹನಗಳು ನಮ್ಮ ಮುಂದೆಯೇ
ನಾಮಫಲಕ ಹಾಕಿಕೊಂಡು ಸಂಚರಿಸಲು
ಅವಕಾಶ ಮಾಡಿಕೊಡುವದು
ಎಷ್ಟು ಸಮಂಜಸ?
ಕೂಡಲೇ ಶಿವಸೇನೆಯ ಬೆಳಗಾವಿ ಕಾರ್ಯಾಲಯವನ್ನು ಮುಚ್ಚಿಸಬೇಕು ಮತ್ತು
ಈ ಸಂಘಟನೆಯ ವಾಹನಗಳನ್ನು
ಜಪ್ತಿ ಮಾಡಬೇಕೆಂದು ಆಗ್ರಹಿಸುವ
ಮನವಿಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಇಂದು
ಸೋಮವಾರ ಮಧ್ಯಾನ್ಹ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ.
ಈ ಮನವಿಯ ಪ್ರತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ಕಳಿಸಲಾಗಿದೆ.