Breaking News

ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದ ರಮೇಶ್ ಜಾರಕಿಹೊಳಿ, ಸದ್ಯ ರಾಜಕೀಯದಲ್ಲಿ ಹಿನ್ನಡೆ ಅನುಭವಿಸುತ್ತಿರಲು ಕಾರಣ ಏನು?

Spread the love

ರಾಜಕೀಯದಲ್ಲಿ ಒಬ್ಬರ ವಿರುದ್ದ ಇನ್ನೊಬ್ಬರು ಕತ್ತಿ ಮಸೆಯುವುದು ನೋಡಿದ್ದೇವೆ, ತಂತ್ರ ಷಡ್ಯಂತ್ರ ರೂಪಿಸುವುದು ಇದ್ದಿದ್ದೇ. ಇದಕ್ಕೆ ರಾಜ್ಯದ ಯಾವ ಪಕ್ಷವೂ ಹೊರತಾಗಿಲ್ಲ. ಜಾರಕಿಹೊಳಿ ಸಿಡಿ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ಸರಕಾರ ವಿಶೇಷ ತನಿಖಾ ದಳವನ್ನು ರಚಿಸಿದೆ.

ತನಿಖೆ ವೇಗವನ್ನು ಪಡೆದುಕೊಳ್ಳುತ್ತಿದ್ದು ಪೊಲೀಸರು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರುವುದರಿಂದ, ಬಿಜೆಪಿ ಮತ್ತು ಕಾಂಗ್ರೆಸ್ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿವೆ.

ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದ ರಮೇಶ್ ಜಾರಕಿಹೊಳಿ, ಸದ್ಯ ರಾಜಕೀಯದಲ್ಲಿ ಹಿನ್ನಡೆ ಅನುಭವಿಸುತ್ತಿರಲು ಕಾರಣ ಏನು ಎನ್ನುವ ವಿಚಾರ ಬಿಜೆಪಿ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

ಬಿಎಸ್ವೈ ಸರಕಾರ ಅಧಿಕಾರಕ್ಕೆ ಬಂದ ನಂತರ ಕೂಡಾ ಇನ್ನೊಂದು ಶಕ್ತಿ ಕೇಂದ್ರದಂತಿದ್ದ ಜಾರಕಿಹೊಳಿಗೆ ಹಿನ್ನಡೆಯಾಗುತ್ತಿರುವುದು ‘ವಾಸ್ತು ದೋಷ’ದಿಂದನಾ ಎನ್ನುವ ವಿಚಾರ, ಜಾರಕಿಹೊಳಿ ಆಪ್ತ ವಲಯದಲ್ಲಿ ಓಡಾಡುತ್ತಿದೆ ಎಂದು ಹೇಳಲಾಗುತ್ತಿದೆ.ಡಿಕೆಶಿ ಮತ್ತು ರಮೇಶ್ ಜಾರಕಿಹೊಳಿ ನಡುವೆ ಆರಂಭವಾದ ರಾಜಕೀಯ ಮೇಲಾಟ

ಬೆಳಗಾವಿ ಡಿಸಿಸಿ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ವಿಚಾರದಲ್ಲಿ ಡಿಕೆಶಿ ಮತ್ತು ರಮೇಶ್ ಜಾರಕಿಹೊಳಿ ನಡುವೆ ಆರಂಭವಾದ ರಾಜಕೀಯ ಮೇಲಾಟ, ಎಚ್ಡಿಕೆ ಸರಕಾರವನ್ನು ಬೀಳಿಸುವ ಮಟ್ಟಕ್ಕೆ ಹೋಗಿತ್ತು. ಇದಾದ ಮೇಲೂ, ಬಿಎಸ್ವೈ ಸರಕಾರದಲ್ಲಿ ಈ ಹಿಂದೆ ಡಿಕೆಶಿ ನಿಭಾಯಿಸಿದ್ದ ಜಲಸಂಪನ್ಮೂಲ ಖಾತೆಯನ್ನೇ ರಮೇಶ್ ಜಾರಕಿಹೊಳಿ ಹಠಕ್ಕೆ ಬಿದ್ದು ಪಡೆದುಕೊಂಡಿದ್ದರು. ಇದೆಲ್ಲಾ ಈಗ ಇತಿಹಾಸ..

ಡಿ.ಕೆ.ಶಿವಕುಮಾರ್ ಅವರ ಮನೆಯ ಹಿಂದೆ ಇರುವ ಬಂಗಲೆ

ಇಷ್ಟಕ್ಕೂ ಮುಗಿಯದೇ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಸದಾಶಿವ ನಗರದಲ್ಲಿ ಇರುವ ಡಿ.ಕೆ.ಶಿವಕುಮಾರ್ ಅವರ ಮನೆಯ ಹಿಂದೆ ಇರುವ ಬಂಗಲೆಯನ್ನು ರಮೇಶ್ ಜಾರಕಿಹೊಳಿ ಖರೀದಿಸಿದ್ದರು. ಈ ಮನೆಯೇ ರಮೇಶ್ ಜಾರಕಿಹೊಳಿ ಹಿನ್ನಡೆ ಅನುಭವಿಸುತ್ತಿರಲು ಕಾರಣವಾಗುತ್ತಿರುವುದು ಎನ್ನುವ ಮಾತು ಕೇಳಿ ಬರುತ್ತಿದೆ. ಕಳೆದ ವರ್ಷದ ಜೂನ್ ಹತ್ತೊಂಬತ್ತರಂದು ಈ ಮನೆಯ ಗೃಹಪ್ರವೇಶ ನಡೆದಿತ್ತು. (ಚಿತ್ರದಲ್ಲಿ ಡಿಕೆಶಿ ಮನೆ)

ಜಾರಕಿಹೊಳಿ ಮನೆಯಲ್ಲಿನ ವಾಸ್ತು ದೋಷ

ಸದಾಶಿವ ನಗರದ ಈ ಮನೆಯಲ್ಲೇ ಸದ್ಯ ಜಾರಕಿಹೊಳಿ ವಾಸ್ತವ್ಯ ಹೂಡಿದ್ದಾರೆ. ಈ ಮನೆಯಲ್ಲಿನ ವಾಸ್ತು ದೋಷವೇ ಅವರ ಸಂಕಷ್ಟಕ್ಕೆ ಕಾರಣ ಎನ್ನುವ ಮಾತು ಕೇಳಿಬರುತ್ತಿವೆ. ಈ ಹಿಂದೆ ಮೂವರು ಈ ಮನೆಯ ಮಾಲೀಕರಾಗಿದ್ದರೂ, ಸಾಕಷ್ಟು ಸಂಕಷ್ಟ ಅನುಭವಿಸಿದ್ದರಿಂದ ಮನೆ ಖಾಲಿ ಮಾಡಿದ್ದರು ಎಂದು ಹೇಳಲಾಗುತ್ತಿದೆ. (ಚಿತ್ರದಲ್ಲಿ ರಮೇಶ್ ಜಾರಕಿಹೊಳಿ ಮನೆ)

ಜಾರಕಿಹೊಳಿ ತೆಗೆದುಕೊಂಡ ಈ ಒಂದು ನಿರ್ಧಾರ ಅವರ ಭವಿಷ್ಯವನ್ನೇ ಮಂಕಾಗಿಸಿತೇ?

ಪ್ರಮುಖವಾಗಿ ಈ ಮನೆಯ ದೈವಮೂಲೆಯಲ್ಲಿ ವಾಸ್ತು ದೋಷವಿದೆ, ಹಾಗಾಗಿ ಇಲ್ಲಿ ಏಳಿಗೆ ಸಾಧ್ಯವಿಲ್ಲ ಎನ್ನುವ ಮಾತು ಚರ್ಚೆಯಲ್ಲಿದೆ. ಜೊತೆಗೆ, ರಮೇಶ್ ಜಾರಕಿಹೊಳಿ ಸಹೋದರರು ಕೂಡಾ ಈ ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಅಂತೆಕಂತೆ ಸುದ್ದಿ ಓಡಾಡುತ್ತಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ