Breaking News

ಮನುಷ್ಯನ ವಾಸನೆ ಹಿಡಿದು ಪರಾರಿಯಾಯ್ತಾ ಪೊನ್ನಂಪೇಟೆ ವ್ಯಾಘ್ರ?

Spread the love

ಕೊಡಗು: ಪೊನ್ನಂಪೇಟೆಯ ನರಭಕ್ಷಕನಿಗಾಗಿ ಇಂದೂ ಕೂಡ ಹುಡುಕಾಟ ಮುಂದುವರಿದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯ ಶಾರ್ಪ್‌ ಶೂಟರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ವಾರ ಕಳೆದರೂ ಹುಲಿ ಕೈಗೆ ಸಿಗದಿರುವುದನ್ನು ನೋಡಿದರೆ ಹುಲಿಗೆ ಮನುಷ್ಯರ ವಾಸನೆ ಗೊತ್ತಾಗಿ ಸುತ್ತಮುತ್ತ ಸುಳಿಯುತ್ತಿಲ್ಲವೇನೋ ಎನ್ನುವ ಅನುಮಾನ ಕಾಡುತ್ತಿದೆ.

ಹುಲಿ ಕಾರ್ಯಾಚರಣೆಗೆ ಇನ್ನಷ್ಟು ಸಿಬ್ಬಂದಿ ಅಗತ್ಯವಿದ್ದ ಕಾರಣ ಶಾರ್ಪ್‌ಶೂಟರ್‌ಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಈ ಮಧ್ಯೆ ಹುಲಿ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದ ಆನೆಗಳನ್ನು ತಕ್ಷಣದಿಂದಲೇ ನಿಲ್ಲಿಸಲಾಗಿದೆ. ಆನೆಗಳು ಕಾಫಿ ತೋಟದ ಮಧ್ಯೆ ಹೋಗುವಾಗ ಕಾಫಿ ಬೆಳೆ ಹಾಲಾಗುತ್ತಿದ್ದ ಹಿನ್ನೆಲೆಯಲ್ಲಿ ತೋಟದ ಮಾಲೀಕರು ಆನೆಗಳ ಬಳಕೆಗೆ ಆಕ್ಷೇಪವೊಡ್ಡಿದ್ದರು. ಇದರಿಂದಾಗಿ ಆನೆಗಳ ಬಳಕೆ ನಿಲ್ಲಿಸಲಾಗಿದೆ.

ವಾರ ಕಳೆದರೂ ಹುಲಿ ಕಾರ್ಯಾಚರಣೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಸ್ಥಳೀಯರ ಆಕ್ರೋಶ ಹೆಚ್ಚಾಗಿದ್ದು, ನಮಗೆ ಅನುಮತಿ ಕೊಡಿ ಹುಲಿಯನ್ನು ಬೇಟೆಯಾಡುತ್ತೇವೆ ಎಂದು ಅರಣ್ಯ ಇಲಾಖೆಗೆ ಸವಾಲು ಹಾಕಿದ್ದಾರೆ.


Spread the love

About Laxminews 24x7

Check Also

ದೇವಾಲಯದ ಸುತ್ತ ಮಾಂಸಾಹಾರ ನಿಷೇಧ ನೋಟಿಸ್‌ ವಾಪಸ್​: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದಲ್ಲಿನ ಹೊನ್ನೇಶ್ವರ ದೇವಾಲಯದ ಸುತ್ತಲು ಪ್ರಾಣಿಗಳ ವಧೆ ಮತ್ತು ಮಾಂಸಾಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ