Breaking News

ಬಜೆಟ್​ನಲ್ಲಿ ಸಾರಿಗೆ ನೌಕರರ ಬೇಡಿಕೆಗಳಿಗೆ ಎಳ್ಳು ನೀರು ..?

Spread the love

ಬೆಂಗಳೂರು: ಮಾರ್ಚ್​ 8ರಂದು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಮಂಡಿಸಿದ ಬಜೆಟ್​ನಲ್ಲಿ ಪ್ರಸ್ತಾಪವೇ ಆಗದ 6 ನೇ ವೇತನ ಆಯೋಗ ವಿಚಾರಕ್ಕೆ ಸಂಬಂಧಿಸಿದಂತೆ. ಇದೇ ತಿಂಗಳ 16ನೇ ತಾರೀಕಿನಂದು ಮತ್ತೆ ಮುಷ್ಕರ ಕೈಗೊಳ್ಳುವಂತೆ ಸಾರಿಗೆ ನೌಕಕರು ಮುಂದಾಗಿದ್ದಾರೆ. ಈ ಕುರಿತಂತೆ ಇಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.

ಡಿಸೆಂಬರ್​ ತಿಂಗಳಿನಲ್ಲಿ ನಾಲ್ಕು ದಿನಗಳ ಕಾಲ ಸಾರಿಗೆ ನೌಕರರ ಮುಷ್ಕರ ನಡೆಸಲಾಗಿತ್ತು. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ‌ ಮಾಡಬೇಕೆಂಬ ಬೇಡಿಕೆಯ ಜೊತೆಗೆ, ಒಟ್ಟು 10 ಬೇಡಿಕೆಗಳನ್ನು ಈಡೇರಿಸವಂತೆ ಮುಷ್ಕರಕ್ಕೆ ಮುಂದಾಗಿದ್ದರು. ಈ ವೇಳೆ ರಾಜ್ಯ ಸರ್ಕಾರ ಸರ್ಕಾರಿ ನೌಕರರನ್ನಾಗಿ ಮಾಡುವ ಬೇಡಿಕೆ ಬಿಟ್ಟು, ಉಳಿದ ಒಂಬತ್ತು ಬೇಡಿಕೆಗಳನ್ನ ಈಡೇರಿಸುವ ಭರವಸೆ ನೀಡಲಾಗಿತ್ತು. ಜೊತೆಗೆ 6ನೇ ವೇತನ ಆಯೋಗ ಜಾರಿಯ ಕುರಿತಾಗಿ ಭರವಸೆ ನೀಡಲಾಗಿತ್ತು. ಆದರೆ ನಿನ್ನೆಯ ಬಜೆಟ್​ನಲ್ಲೂ ಬೇಡಿಕೆ ಈಡೇರಿಸಿಲ್ಲ ಎಂಬ ಕಾರಣಕ್ಕೆ ಮತ್ತೆ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗಿದ್ದಾರೆ.

ಮಾರ್ಚ್ 16ನೇ ತಾರೀಕಿನಂದು ಮುಷ್ಕರ ಕೈಗೊಳ್ಳುವುದರ ಬಗ್ಗೆ ಇಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಗಾಂಧಿ ನಗರದ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಹನ್ನೆರಡು ಗಂಟೆ ಸುಮಾರಿಗೆ ಕೋಡಿಹಳ್ಳಿ ಚಂದ್ರಶೇಖರ್ ಸಭೆ ನಡೆಯಲಿದೆ. ಸಭೆಯಲ್ಲಿ ಸಾರಿಗೆ ಮುಖಂಡರು ಭಾಗಿಯಾಗಲಿದ್ದು, ಮುಂದಿನ ಹೋರಾಟ ಯಾವ ರೀತಿ ರೂಪಿಸಬೇಕು, ಮುಷ್ಕರ ನಡೆಸ ಬೇಕೋ ಬೇಡವೋ? ಈ ಎಲ್ಲಾ ಅಂಶಗಳ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಅವರ ಜೊತೆ ಸಭೆ ಕೈಗೊಳ್ಳಲಿದ್ದಾರೆ. ಸಭೆ ಬಳಿಕ ಮುಂದಿನ ತೀರ್ಮಾನ ಘೋಷಣೆಯಾಗಲಿದೆ.


Spread the love

About Laxminews 24x7

Check Also

ಕೃಷ್ಣಾ ನದಿ ನೀರು ವಿನಿಮಯ ಒಪ್ಪಂದಕ್ಕೆ ನಿರ್ಲಕ್ಷ್ಯ

Spread the love ಕೃಷ್ಣಾ ನದಿ ನೀರು ವಿನಿಮಯ ಒಪ್ಪಂದಕ್ಕೆ ನಿರ್ಲಕ್ಷ್ಯ ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯಗಳ‌ ಮಧ್ಯೆ ಬೇಕಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ