Breaking News

ಬೆಳಗಾವಿಯಲ್ಲಿ ಆರಂಭಗೊ0ಡಿದೆ ಪಾಲಿಕೆಯ ಕನ್ನಡ ಧ್ವಜ ತೆರವುಗೊಳಿಸುವಂತೆ ಎಂಇಎಸ ಪ್ರತಿಭಟನಾ ಮೆರವಣಿಗೆ..

Spread the love

ಬೆಳಗಾವಿ ಮಹಾಪಾಲಿಕೆ ಎದುರಿನ ಕನ್ನಡ ಧ್ವಜವನ್ನ ತೆರವುಗೊಳಿಸಬೇಕೆಂದು ಒತ್ತಾಯಿಸಿ ಬೆಳಗಾವಿಯಲ್ಲಿ ಮಧ್ಯವರ್ತಿ ಮಹಾರಾಷ್ಟç ಏಕೀಕರಣ ಸಮೀತಿಯ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನಾ ರ‍್ಯಾಲಿಯನ್ನ ಹಮ್ಮಿಕೊಳ್ಳಲಾಗಿತ್ತು.

ಸೋಮವಾರ ಧರ್ಮವೀರ ಸಂಭಾಜೀ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ್ಲ ಮಧ್ಯವರ್ತಿ ಮಹಾರಾಷ್ಟç ಏಕೀಕರಣ ಸಮೀತಿಯ ನೇತೃತ್ವದಲ್ಲಿ ಮೆರವಣಿಗೆ ಆರಂಭಗೊAಡಿತು. ಈ ವೇಳೆ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಭಗವಾ ಧ್ವಜವನ್ನ ಹಾರಿಸಲೇ ಬೇಕೆಂದು ಘೋಷಣೆಗಳನ್ನ ಕೂಗಿದರು.

ಮಾಜಿ ಮಹಾಪೌರ ಸರೀತಾ ಪಾಟೀಲ ಅವರು ಮಾತನಾಡಿ, ರಾಷ್ಟçಧ್ವಜವನ್ನ ಅಪಮಾನಿಸುವಂತಹ ಯಾವುದೇ ಧ್ವಜವನ್ನ ಹಾರಿಸ ಕೂಡದು ಎಂದು ನಿಯಮವಿದ್ದರೂ ಸಹ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜವನ್ನ ಹಾರಿಸಿ ರಾಷ್ಟç ಧ್ವಜವನ್ನ ಅಪಮಾನಿಸಿದ್ಧಾರೆ ಆದ್ಧರಿಂದ ನಾವೂ ಸಹಿಸುವುದಿಲ್ಲ. ಕನ್ನಡ ಧ್ವಜವನ್ನ ಜಿಲ್ಲಾಡಳಿತ ತೆರವುಗೊಳಿಸಲು ಮುಂದೆ ಬರುತ್ತಿಲ್ಲ. ಆದಕಾರಣ ನಾವೂ ಇಂದು ಭಗವಾಧ್ವಜವನ್ನ ಹಾರಿಸಲು ಹೊರಟಿದ್ಧೇವೆ. ಹಾರಿಸಿಯೇ ತಿರುತ್ತೇವೆ.

ಇನ್ನು ಮಾಜಿ ಉಪಮಹಾಪೌರ ರೇಣು ಕಿಲ್ಲೇಕರ ನಾವೂ ಬೇರೆ ಧ್ವಜವನ್ನ ನಿಷೇಧಿಸುವುದಿಲ್ಲ ಆದರೇ ರಾಷ್ಟçಧ್ವಜವನ್ನ ಅವಮಾನಿಸಲೂ ಬಿಡುವುದಿಲ್ಲ. ಭಗವಾಧ್ವಜಕ್ಕೆ ಇತಿಹಾಸವಿದ್ದು, ಯಾವುದೇ ಜಾತಿ ಧರ್ಮಕ್ಕೆ ಸಿಮೀತವಾಗಿಲ್ಲ. ಇಂದು ಹಿಂದೂಧರ್ಮದ ಪ್ರತೀಕವಾಗಿದೆ. ನೀವೂ ಒಂದು ಕನ್ನಡ ಧ್ವಜವನ್ನ ತೆರವುಗೊಳಿಸಿ ಇಲ್ಲವೇ ಭಗವಾ ಧ್ವಜವನ್ನ ನೀವೇ ಹಾರಿಸಿ ಅಥವಾ ನಮಗೆ ಹಾರಿಸಲೂ ಅವಕಾಶ ಮಾಡಿಕೊಡಿ. ಮರು ಮಾತನಾಡದೇ ನಾವೂ ಹಿಂದಿರುಗುತ್ತೇವೆ ಎಂದರು.

ನೇತಾಜಿ ಜಾಧವ ಅವರು ಮಾತನಾಡಿ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕಾನೂನು ವಿರುದ್ಧವಾಗಿ ಯಾವುದೇ ಸರ್ಕಾರದಿಂದ ಮಾನ್ಯಕರಿಸದ ಹಳದಗೆಂಪು ಧ್ವಜವನ್ನ ಹಾರಿಸಲಾಗಿದೆ. ಬೆಳಗಾವಿಯ ಪಾಲಿಕೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊAಡಾಗ ಈ ಮೊದಲೂ ಅದರ ಮೇಲಿದ್ದ ಭಗವಾಧ್ವಜವನ್ನ ಹಾರಿಸಲೇ ಇಲ್ಲ. ೨ ತಿಂಗಳಿAದ ಜಿಲ್ಲಾಡಳಿತದ ಗಮನಕ್ಕೆ ತರಲಾಗುತ್ತಿದ್ದು, ಸಮಸ್ಯೆಯನ್ನ ನೀಗಿಸಲೂ ಭರವಸೆ ನೀಡಲಾಗಿತ್ತು. ಆದರೇ ೨ ತಿಂಗಳು ಕಳೆದರೂ ಇನ್ನು ಕನ್ನಡ ಧ್ವಜವನ್ನ ಹಾರಿಸಿದವರು ವಿರುದ್ಧ ಕ್ರಮಕೈಗೊಂಡಿಲ್ಲ. ಅದನ್ನ ತೆರವು ಸಹಗೊಳಿಸಿಲ್ಲ. ಧ್ವಜ ಹಾರಿಸಿದವರ ವಿರುದ್ಧ ಕ್ರಮಕೈಗೊಳ್ಳದ ಜಿಲ್ಲಾಡಳಿತ ಪ್ರತಿಭಟನಾಕಾರರಿಗೆ ನೋಟಿಸ್ ನೀಡಿದೆ.

ಕಿರಣ ಗಾವಡೆ ಅವರು ಮಾತನಾಡಿ ಬೇರೆಡೆಯಿಂದ ಬಂದು ಬೆಳಗಾವಿಯ ಸೌಹಾರ್ದತೆಕ್ಕೆ ಧಕ್ಕೆ ಬರುವಂತೆ ಪಾಲಿಕೆಯ ಮುಂಭಾಗದ ರಾಷ್ಟç ಧ್ವಜದ ಹತ್ತಿರ ಹಳದಿಗೆಂಪು ಧ್ವಜವನ್ನ ಹಾರಿಸಲಾಗಿದೆ. ಆದರೇ ಕಳೆದ ೨ ತಿಂಗಳಿನಿAದ ಜಿಲ್ಲಾಡಳಿತ ಇದರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ತತಕ್ಷಣ ಧ್ವಜವನ್ನ ತೆರವುಗೊಳಿಸಬೇಕು. ಇಲ್ಲವಾದರೇ ಈ ಪ್ರತಿಭಟನೆಯನ್ನ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಡಳಿತ ಬೆಳಗಾವಿಯ ಸೌಹಾರ್ದತೆಗೆ ಧಕ್ಕೆ ತರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಈ ಪ್ರಕರಣಗಳಲ್ಲಿ ರಾಜಕಾರಣಿಗಳು ಕೂಡ ಭಾಗಿಯಾಗಿದ್ಧಾರೆಂದು ಗಂಭೀರ ಆರೋಪ ಮಾಡಿದರು.

ಮೆರವಣಿಗೆಯಲ್ಲಿ ಮರಾಠಾ ಭಾಷಿಕರು ಸಹಸ್ರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ಧರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಖಡಕ್ ಪೋಲಿಸ್ ಬಂದೋಬಸ್ತ್ನ್ನ ಒದಗಿಸಲಾಗಿತ್ತು.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ