ನವದೆಹಲಿ: ದೇಶದಲ್ಲಿ ಕೊರೊನಾ ಅಬ್ಬರ ಮತ್ತೆ ಆರಂಭವಾಗಬಹುದು ಅನ್ನುವ ಆತಂಕ ಕೆಲವೆಡೆ ಮನೆ ಮಾಡಿದೆ. ಈ ಹಿನ್ನಲೆ ಕೊರೊನಾ ಸೋಂಕಿನ ಹರಡುವಿಕೆಗೆ ಕಡಿವಾಣ ಹಾಕೋಕೆ ‘ಟೆಸ್ಟ್, ಟ್ರ್ಯಾಕ್, ಟ್ರೀಟ್’ ಎಂಬ ಮಂತ್ರವನ್ನು ಪಾಲಿಸಿ ಎಂದು 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಹರಿಯಾಣ, ಆಂಧ್ರಪ್ರದೇಶ, ಒಡಿಶಾ, ಗೋವಾ, ಹಿಮಾಚಲ, ಉತ್ತರಾಖಂಡ, ದೆಹಲಿ ಮತ್ತು ಚಂಡೀಘಡದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಪರೀಕ್ಷೆ ನಡೆಸಿ, ಲಸಿಕೆ ನೀಡುವ ಪ್ರಮಾಣವನ್ನೂ ಹೆಚ್ಚಿಸುವಂತೆ ಕೇಂದ್ರ ಸೂಚಿಸಿದೆ. ದೇಶದಲ್ಲಿ ವೃದ್ದಿಯಾಗುತ್ತಿರುವ ಕೊರೊನಾ ಸಂಖ್ಯೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಈ ರೀತಿಯ ಸೂಚನೆಗಳನ್ನು ರವಾನೆ ಮಾಡಿದೆ.
Laxmi News 24×7