Breaking News

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2.74 ಕೋಟಿ ಮೌಲ್ಯದ 207 ಐಫೋನ್ ವಶ

Spread the love

ಬೆಂಗಳೂರು:ಯುಎಸ್ ದಂಪತಿಯಿಂದ ಅಪಾರ ಮೊತ್ತದ 207 ಐಫೋನ್ ಗಳನ್ನು ವಶಪಡಿಸಿಕೊಂಡಿರವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು.

ಈವರೆಗೂ ವಶಪಡಿಸಿಕೊಂಡಿರುವ ಫೋನ್ ಸಂಬಂಧಿ ಪ್ರಕರಣಗಳಲ್ಲಿ ಇದು ಅತಿ ದೊಡ್ಡ ಪ್ರಕರಣ ಎಂದು ಪರಿಗಣಿಸಲಾಗಿದ್ದು, ಇದರಲ್ಲಿ ಫೋನ್ಗಳು ಐಫೋನ್ 12 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳಾಗಿದ್ದವು ಮತ್ತು ಅವುಗಳ ಒಟ್ಟು ಮೌಲ್ಯ 2, 74,19,400 ರೂ. ಎಂದು ಹೇಳಲಾಗುತ್ತಿದೆ.

ಅಷ್ಟು ಮಾತ್ರವಲ್ಲದೆ, ರಸ್ತೆ ಮೂಲಕ ಹೈದರಾಬಾದ್‌ಗೆ ಸಾಗಿಸಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಕಾರನ್ನು ಸಹ ಗುಪ್ತಚರ ಅಧಿಕಾರಿಗಳು ವಶಪಡಿಸಿಕೊಂಡಿದೆ ಎಂದು ವರದಿಗಳು ತಿಳಿಸುತ್ತವೆ.

ಪ್ಯಾರಿಸ್ ನಿಂದ ಏರ್ ಫ್ರಾನ್ಸ್ ವಿಮಾನದ (ಎಎಫ್ 194) ಮೂಲಕ ಮುಂಜಾನೆ 3.30 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದ ದಂಪತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರನ್ನು ಮಾರ್ಚ್ 12 ರವರೆಗೆ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

 

Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ