Breaking News
Home / Uncategorized / ಮಾ.2ರಂದು ಅಂಗನವಾಡಿ ಕಾರ್ಯಕರ್ತರಿಂದ ‘ವಿಧಾನಸೌಧ ಚಲೋ

ಮಾ.2ರಂದು ಅಂಗನವಾಡಿ ಕಾರ್ಯಕರ್ತರಿಂದ ‘ವಿಧಾನಸೌಧ ಚಲೋ

Spread the love

ಬೆಂಗಳೂರು, ಫೆ. 27: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರಕಾರದ ‘ಸಿ’ ಮತ್ತು ‘ಡಿ’ ಗ್ರೂಪ್ ನೌಕರರೆಂದು ಪರಿಗಣಿಸಬೇಕು. ಇಲಾಖೆಯು ಈ ವೃಂದಗಳ ನೌಕರರಿಗೆ ನೀಡುವ ಎಲ್ಲ ಶಾಸನಬದ್ಧ ಸೌಕರ್ಯಗಳನ್ನು ನೀಡಬೇಕೆಂದು ಆಗ್ರಹಿಸಿ ಮಾ.2ರಂದು ಎಐಯುಟಿಯುಸಿ ‘ವಿಧಾನಸೌಧ ಚಲೋ’ ಹಮ್ಮಿಕೊಂಡಿದೆ.

ಸರಕಾರಿ ನೌಕರರಿಗೆ ಸರಿಸಮನಾಗಿ ಮಾಸಿಕ ವೇತನ ಮತ್ತಿತರ ಸೌಕರ್ಯಗಳನ್ನು ನೀಡಬೇಕು ಅಥವಾ ಕಾರ್ಯಕರ್ತೆಯರಿಗೆ 25 ಸಾವಿರ ರೂ.ಹಾಗೂ ಸಹಾಯಕಿಯರಿಗೆ 21 ಸಾವಿರ ರೂ.ಮಾಸಿಕ ವೇತನ ನೀಡಬೇಕು. ಸೇವಾ ಹಿರಿತನ ಆಧರಿಸಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮಾಸಿಕ ವೇತನ ನಿಗದಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಕೊಡುಗೆ ಆಧರಿತ ಪಿಂಚಣಿ ಯೋಜನೆ ಕೈಬಿಟ್ಟು, ಸರಕಾರದ ಪಿಂಚಣಿ ಯೋಜನೆಗೆ ಒಳಪಡಿಸಬೇಕು. ಈಗಾಗಲೇ ನಿವೃತ್ತಿಯಾದ ನೌಕರರಿಗೆ ನಿವೃತ್ತಿ ಪರಿಹಾರಗಳು ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಿ ಸರಳವಾಗಿ ನಿವೃತ್ತಿ ಪರಿಹಾರ ಸಿಗುವಂತೆ ಸೂಕ್ತ ಕ್ರಮವಹಿಸಬೇಕು. ಅಂಗನವಾಡಿ ಕೇಂದ್ರಗಳ ಬಾಡಿಗೆ ದರ, ಮೊಟ್ಟೆ ದರ, ಸಾದಿಲ್ವಾರು, ಫ್ಲೆಕ್ಸಿ ಫಂಡ್ ಅನುದಾನ ಇತ್ಯಾದಿ ದರಗಳನ್ನು ಹೆಚ್ಚಿಸಬೇಕು.

ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು. ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್ ಹಾಗೂ ಕಾರ್ಯದರ್ಶಿ ರಮಾ ಟಿ.ಸಿ. ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಜನರ ಬದುಕಿನ ಭಾರ ಕಡಿಮೆ ಮಾಡಿದ್ದು ಕಾಂಗ್ರೆಸ್‌ ಎಂದ ಈ. ತುಕಾರಾಂ

Spread the love ಹೊಸಪೇಟೆ: ರೈತರ ಸಾಲ ಮನ್ನಾದಿಂದ ಹಿಡಿದು ಜನ ಸಾಮಾನ್ಯರ ಬದುಕಿನ ಭಾರವನ್ನು ಕಡಿಮೆ ಮಾಡಿದ್ದು ಕಾಂಗ್ರೆಸ್‌. ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ