ಬೆಳಗಾವಿ.
ಕ್ರಿಕೆಟ್ ಬೆಟ್ಟಿಂಗ್ ಅಷ್ಟೇ ಅಲ್ಲ ಹವಾಲಾ ಮತ್ತಿತರ ದಂಧೆಗಳಿಗೆ ಕಡಿವಾಣ ಹಾಕಲು ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.
ಈ ದಂಗೆಯನ್ನು ಮಟ್ಟ ಹಾಕಲು ಕೇವಲ ಜಿಲ್ಲಾ ಪೊಲೀಸರು ಅಷ್ಟೇ ಅಲ್ಲ ಬೆಳಗಾವಿ ನಗರ ಪೊಲೀಸರು ತಯಾರಾಗಿ ಕುಳಿತಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ, ಬೆಟ್ಟಿಂಗ್ ದಂಧೆ ಸಮಗ್ರ ಮಾಹಿತಿ ಈಗ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಿವಿಗೂ ಬಿದ್ದಿದೆ. ಹೀಗಾಗಿ ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದರಲ್ಲಿ ಎರಡು ಮಾತಿಲ್ಲ.