Breaking News

ರಾಜ್ಯಕ್ಕೆ ಬಂದ ನಂತರ ತಕ್ಕ ಪ್ರತ್ಯುತ್ತರ ನೀಡುತ್ತೇನೆ: ಕಾಂಗ್ರೆಸ್ ನ ಬಿ ಟೀಂ ಎಂದ ಸಚಿವರಿಗೆ ಯತ್ನಾಳ್ ತಿರುಗೇಟು

Spread the love

ನವದೆಹಲಿ: “ನಾನು ಕರ್ನಾಟಕಕ್ಕೆ ಹಿಂದಿರುಗಿದ ನಂತರ ಅವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ” ಎಂದು ಹೇಳುವ ಮೂಲಕ ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ ಅವರು ತಾವು ಕಾಂಗ್ರೆಸ್ ನ ಬಿ ಟೀಂ ಎಂದ ಸಚಿವ ಮುರುಗೇಶ್.ಆರ್ ನಿರಾಣಿ ಅವರಿಗೆ ಮಂಗಳವಾರ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‍ನ ಬಿ ಟೀಮ್‍ನಂತೆ ಕೆಲಸ ಮಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್‍ಗೆ ತಾಕತ್ತಿದ್ದರೆ, ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷೇತರ ಶಾಸಕನಾಗಿ ಗೆದ್ದು ಬರಲಿ ಎಂದು ನಿನ್ನೆ ಮುರುಗೇಶ್ ನಿರಾಣಿ ಅವರು ಬಹಿರಂಗ ಸವಾಲು ಹಾಕಿದ್ದರು.

ಇಂದು ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಯತ್ನಾಳ್, “ಕರ್ನಾಟಕದ ಇಬ್ಬರು ಸಚಿವರು ನನ್ನ ಮತ್ತು ನನ್ನ ಸಮುದಾಯದ ಮಠಾಧೀಶರ ವಿರುದ್ಧ ಮಾತನಾಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ನಾನು ರಾಜ್ಯಕ್ಕೆ ಮರಳಿದ ನಂತರ ಅವರ ಆರೋಪಗಳಿಗೆ ಉತ್ತರಿಸುತ್ತೇನೆ” ಎಂದಿದ್ದಾರೆ.

ಇದೇ ವೇಳೆ ತಮ್ಮ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, “ಪಕ್ಷದ ಹೈಕಮಾಂಡ್ ನನಗೆ ಬುಲಾವ್ ನೀಡಿಲ್ಲ ಮತ್ತು ನಾನು ಅವರ ಭೇಟಿ ಯಾವುದೇ ಸಮಯ ಕೋರಿಲ್ಲ. ಶ್ರೀ ಸಿದ್ದೇಶ್ವರ ಸಂಸ್ಥೆಯ ಸಿಬಿಎಸ್‌ಇ ಶಾಲೆಗಳಲ್ಲಿ ಒಂದನ್ನು ನೋಂದಾಯಿಸಲು ನಾನು ದೆಹಲಿಗೆ ಬಂದಿದ್ದೇನೆ” ಎಂದು ಹೇಳಿದರು.


Spread the love

About Laxminews 24x7

Check Also

ಗಣಪತಿ ಹಬ್ಬದ ಆಗಮನ — ಗ್ರಾಮೀಣ ಭಾಗದಲ್ಲಿ ಭಕ್ತಿ, ಸಂಭ್ರಮ, ಸಾಂಸ್ಕೃತಿಕ ಚೈತನ್ಯ ಸಾವಳಗಿ

Spread the love ಗಣಪತಿ ಹಬ್ಬದ ಆಗಮನ — ಗ್ರಾಮೀಣ ಭಾಗದಲ್ಲಿ ಭಕ್ತಿ, ಸಂಭ್ರಮ, ಸಾಂಸ್ಕೃತಿಕ ಚೈತನ್ಯ ಸಾವಳಗಿ ರಾಜ್ಯದಾದ್ಯಂತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ