Breaking News

ಬಾಲಿವುಡ್​ಗೆ ರವಿ ಬಸ್ರೂರು

Spread the love

ಬೆಂಗಳೂರು: ರವಿ ಬಸ್ರೂರು ಈಗಾಗಲೇ ‘ಕೆಜಿಎಫ್’ ಚಿತ್ರಗಳ ಮೂಲಕ ಬೇರೆ ಭಾಷೆಯ ಚಿತ್ರರಂಗಗಳಿಗೂ ಪರಿಚಿತರಾಗಿದ್ದಾರೆ. ಇನ್ನು, ಈಗಾಗಲೇ ತೆಲುಗು, ಮಲಯಾಳಂ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್​ಗೂ ಕಾಲಿಟ್ಟಿದ್ದಾರೆ.

ಬಾಲಿವುಡ್​ನ ಜನಪ್ರಿಯ ನಟ-ನಿರ್ದೇಶಕ ಫರ್ಹಾನ್ ಅಖ್ತರ್, ‘ಯುದ್ರ’ ಎಂಬ ಚಿತ್ರವನ್ನು ನಿರ್ವಿುಸುತ್ತಿದ್ದು, ಈ ಚಿತ್ರಕ್ಕೆ ರವಿ ಬಸ್ರೂರು ಹಿನ್ನೆಲೆ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು, ಮತ್ತೊಬ್ಬ ಕನ್ನಡಿಗ ರವಿ ಉದ್ಯಾವರ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಸೋಮವಾರ ಸೋಷಿಯಲ್ ಮೀಡಿಯಾ ಮೂಲಕ ‘ಯುದ್ರ’ ಚಿತ್ರವನ್ನು ಘೋಷಿಸಿರುವ ಫರ್ಹಾನ್, ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಿದ್ದಾರೆ. ಸಿದ್ಧಾಂತ್ ಚತುರ್ವೆದಿ ಮತ್ತು ಮಾಳವಿಕಾ ಮೋಹನನ್ ನಟಿಸುತ್ತಿರುವ ಈ ಚಿತ್ರವು 2022ರ ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ಶುರುವಾಗಲಿದೆ.


Spread the love

About Laxminews 24x7

Check Also

ಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್!

Spread the loveಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್! ಬೆಂಗಳೂರು: ವಯೋವೃದ್ಧ ಕಾರು ಚಾಲಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ