Breaking News

ಸಿದ್ದರಾಮಯ್ಯರ ಅಹಿಂದ ಲೆಕ್ಕಾಚಾರಕ್ಕೆ ಸತೀಶ ಜಾರಕಿಹೊಳಿ ಹೇಳಿದ್ದೇನು..?

Spread the love

ಕಾಂಗ್ರೆಸ್ ಪಕ್ಷ ಇರೋದೆ ಅಹಿಂದ್ ಬೇಸ್ ಮೇಲೆ, ಹೀಗಾಗಿ ಮತ್ತೆ ಅಹಿಂದ ಸಮಾವೇಶ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸುತ್ತಾರೆ ಎಂಬ ಚರ್ಚೆ ಕೇಳಿ ಬರುತ್ತಿರುವ ವಿಚಾರಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ ಜಾರಕಿಹೊಳಿ ಈ ಬಗ್ಗೆ ಎಲ್ಲಿಯೂ ಚರ್ಚೆ ಆಗಿಲ್ಲ, ಅಹಿಂದ ಚಳುವಳಿ ಎಲ್ಲಿಯೂ ಇಲ್ಲವೇ ಇಲ್ಲ, ಯಾಕೆಂದರೆ ಕಾಂಗ್ರೆಸ್ ಪಕ್ಷ ಇರೋದೇ ಅಹಿಂದ್ ಬೇಸ್ ಮೇಲೆ. ಹೀಗಾಗಿ ಪ್ರತ್ಯೇಕ ಅಹಿಂದ ಮಾಡುವ ಅವಶ್ಯಕತೆ ಇಲ್ಲ. ಈ ಹಿಂದೆ ನಾವು ಅಹಿಂದ ಸಮಾವೇಶ ಮಾಡಿದಾಗ ನಾವು ಕಾಂಗ್ರೆಸ್‌ನಲ್ಲಿ ಇರಲಿಲ್ಲ.

ಹೀಗಾಗಿ ಈಗ ಮತ್ತೊಮ್ಮೆ ಸಿದ್ದರಾಮಯ್ಯ ಸೇರಿ ಮತ್ಯಾರದೇ ನೇತೃತ್ವದಲ್ಲಿ ಅಹಿಂದ್ ಸಮಾವೇಶ ಮಾಡುವ ಯೋಚನೆ ಯಾರಲ್ಲಿಯೂ ಇಲ್ಲ. ಕಾಂಗ್ರೆಸ್ ಪಕ್ಷ ಇರೋದೆ ಅಹಿಂದ. ಮತ್ತೆ ಒಗ್ಗೂಡಿಸುವ ಪ್ರಶ್ನೆಯೇ ಇಲ್ಲ. ಎಲ್ಲ ಸಮಾಜ, ಜಾತಿಗಳನ್ನು ಒಂದೇ ವೇದಿಕೆಯಲ್ಲಿ ತೆಗೆದುಕೊಂಡು ಹೋಗುವ ಪಕ್ಷ ನಮ್ಮದು ಎಂದರು.

ಇನ್ನು ಬಾದಾಮಿಯಲ್ಲಿ ಮತ್ತೆ ನಾನೇ ಸಿಎಂ ಆಗುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ಈ ಬಗ್ಗೆ ನನಗೇನೂ ಗೊತ್ತಿಲ್ಲ, ನೋಡಬೇಕು, ಅವರನ್ನೆ ಕೇಳಬೇಕು, ಯಾಕೆ ಹೇಳಿದ್ರು, ಎಲ್ಲಿ ಹೇಳಿದ್ರು ಎಂದು ಮಾಧ್ಯಮಗಳಿಗೆ ಮರು ಪ್ರಶ್ನಿಸಿದರು.


Spread the love

About Laxminews 24x7

Check Also

1857ರ ಸಿಪಾಯಿ ದಂಗೆಗೂ 33 ವರ್ಷಗಳ ಮೊದಲೇ ಬ್ರಿಟೀಷರನ್ನು ಕಿತ್ತೂರು ಚೆನ್ನಮ್ಮ ಸೋಲಿಸಿದರು.

Spread the love1857ರ ಸಿಪಾಯಿ ದಂಗೆಗೂ 33 ವರ್ಷಗಳ ಮೊದಲೇ ಬ್ರಿಟೀಷರನ್ನು ಕಿತ್ತೂರು ಚೆನ್ನಮ್ಮ ಸೋಲಿಸಿದರು. ಬ್ರಿಟೀಷರನ್ನು ಸೋಲಿಸಿ ಕಿತ್ತೂರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ