ಬೆಂಗಳೂರು, ಫೆ.10- ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಬಾಡಿಬಿಲ್ಡರ್ ಜಿಮ್ ರವಿ ಅವರು ಈಗ ನಾಯಕನಟರಾಗಿ ಮಿಂಚಲು ಮುಂದಾಗಿದ್ದಾರೆ. ಈಗಾಗಲೇ ಜಿಮ್ ರವಿ ಅವರು ರಾಜ್ಯ, ರಾಷ್ಟ್ರ ಅಷ್ಟೇ ಏಕೆ ಅಂತ ರಾಷ್ಟ್ರಮಟ್ಟದಲ್ಲೂ ಬಾಡಿ ಬಿಲ್ಡಿಂಗ್‍ನಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ, ಕಿರುತೆರೆ, ಹಿರಿತೆರೆಯಲ್ಲೂ ನಟಿಸಿದ್ದಾರೆ. ಕಳೆದ ಬಾರಿ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಅವರು ಮಿಂಚಿದ್ದರು. ಇದೀಗ ಚಲನಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಅಭಿಮಾನಿಗಳ ಮನಗೆಲ್ಲಲು ಸಿದ್ಧರಾಗಿದ್ದಾರೆ.
ರವಿ ಅವರು ಕಳೆದ ಎರಡೂವರೆ ದಶಕಗಳಿಂದ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.ಇದೀಗ ಅವರು ಪುರುಷೋತ್ತಮ ಎಂಬ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದಲ್ಲದೆ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
Laxmi News 24×7