ಬೆಂಗಳೂರು: ತಮ್ಮ ಬಿರುಸಿನ ರಾಜಕೀಯ ಚಟುವಟಿಕೆಗಳಿಂದ ಕೊಂಚ ಬ್ರೇಕ್ ತಗೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಇವತ್ತು ಶಾಪಿಂಗ್ ಮಾಡಲು ತೆರಳಿದ್ದರು. ಹೌದು, ವಿಪಕ್ಷ ನಾಯಕರು ಇಂದು ನಗರದ ಚಿಕ್ಕಪೇಟೆಯ ಗಾಂಧಿ ಗ್ರಾಮೋದ್ಯೋಗ ಮಳಿಗೆಗೆ ಭೇಟಿ ಕೊಟ್ಟು ಬಟ್ಟೆ ಖರೀದಿಗೆ ಮುಂದಾದರು. Siddaramaiah cotton panche purchase


ಶಾಪಿಂಗ್ ವೇಳೆ ಅಂಗಡಿ ಸಿಬ್ಬಂದಿಗೆ ಖಾದಿ ಶರ್ಟ್ ಮತ್ತು ಪಂಚೆಗಳನ್ನು ತೋರಿಸಲು ಸಿದ್ದರಾಮಯ್ಯ ಕೇಳಿದರು. ಈ ವೇಳೆ, ಸಣ್ಣ ಬಾರ್ಡರ್ ಇರೋ ಪಂಚೆ ತೋರಿಸಲು ಕೇಳಿದ ಸಿದ್ದರಾಮಯ್ಯ ದೊಡ್ಡ ಬಾರ್ಡರ್ ಇರೋ ಪಂಚೆ ಬೇಡಯ್ಯ, ಚೆನ್ನಾಗಿರೋ ಪಂಚೆ ಕೊಡಯ್ಯ.. ಕಲರ್ ಇಲ್ದೇ ಇರೋದು ಕೊಡಬೇಡಯ್ಯ ಎಂದು ಅಂಗಡಿ ಸಿಬ್ಬಂದಿಗೆ ಗದರಿದರು.


ಕೊನೆಗೆ ತಮ್ಮ ಇಷ್ಟವಾದ ಶರ್ಟ್ ಹಾಗೂ ಪಂಚೆ ಜೋಡಿಯನ್ನು ಖರೀದಿಸಿದರು. ಮಾಜಿ ಸಿಎಂ ಅವರ ಶಾಪಿಂಗ್ ಟ್ರಿಪ್ಗೆ ಕಾಂಗ್ರೆಸ್ ಮುಖಂಡ ಅಶೋಕ್ ಪಟ್ಟನ್ ಸಾಥ್ ಕೊಟ್ಟರು.
Laxmi News 24×7