Breaking News

ಕೊನೆಗೂ ಬಳ್ಳಾರಿಯನ್ನು ವಿಭಜಿಸಿ ಹೊಸ ವಿಜಯನಗರ ಜಿಲ್ಲೆಯನ್ನು ಘೋಷಿಸಿದ ಸರ್ಕಾರ; ಹೊಸಪೇಟೆ ಕಾರ್ಯಸ್ಥಾನ!

Spread the love

ಬೆಂಗಳೂರು (ಫೆಬ್ರವರಿ 08); ಸಚಿವ ಆನಂದ್​ ಸಿಂಗ್ ಅವರ ಮನವಿಗೆ ಕೊನೆಗೂ ಮನ್ನಣೆ ನೀಡಿರುವ ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ಒಡೆದು ಹೊಸ ವಿಜಯನಗರ ಜಿಲ್ಲೆಯನ್ನು ಇಂದು ವಿಧಾನ ಮಂಡಲ ಅಧಿವೇಶನದಲ್ಲಿ ಘೋಷಿಸಿದೆ. ಆ ಕುರಿತು ಅಧಿಕೃತ ಆದೇಶವನ್ನೂ ಸಹ ರಾಜ್ಯ ಸರ್ಕಾರ ಹೊರಡಿಸಿದೆ. ಹೊಸಪೇಟೆಯನ್ನು ಕಾರ್ಯಸ್ಥಾನವನ್ನಾಗಿಸಿ ವಿಜಯನಗರ ಎಂಬ ಹೊಸ ಜಿಲ್ಲೆಯನ್ನು ಘೋಷಿಸಬೇಕು ಎಂಬ ಕೂಗು ಬಹುದಿನಗಳಿಂದಲೂ ಇದೆ. ಕೊಪ್ಪಳವನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿದ ಸಂದರ್ಭದಲ್ಲೇ ಈ ಕೂಗು ಜೋರಾಗಿ ಕೇಳಿ ಬಂದಿತ್ತು. ಹೋರಾಟಗಳೂ ಸಹ ನಡೆದಿದ್ದವು. ಆದರೆ, ಸರ್ಕಾರ ಈ ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಸಚಿವ ಆನಂದ್​ ಸಿಂಗ್ ಇದೇ ಕಾರಣಕ್ಕೆ ಕಾಂಗ್ರೆಸ್​ ಪಕ್ಷದಿಂದ ಹೊರಬಂದು ಬಿಜೆಪಿ ಸೇರ್ಪಡೆಯಾಗಿದ್ದರು.

ಸಚಿವ ಆನಂದ್ ಸಿಂಗ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವಾಗಲೇ ಬಳ್ಳಾರಿಯನ್ನು ಒಡೆದು ವಿಜಯನಗರವನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟೆ ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಹೀಗಾಗಿ ಆನಂದ್​ ಸಿಂಗ್​ ಗೆ ಕೊಟ್ಟ ಮಾತಿನ ಮೇರೆಗೆ ಸಿಎಂ ಯಡಿಯೂರಪ್ಪ ಕೊನೆಗೂ ವಿಜಯನಗರ ಜಿಲ್ಲೆಯನ್ನು ಇಂದು ಘೋಷಣೆ ಮಾಡಿದ್ದಾರೆ.

ರಾಜ್ಯದ 31ನೇ ಜಿಲ್ಲೆ ವಿಜಯನಗರಕ್ಕೆ ರಾಜ್ಯ ಸಚಿವ ಸಂಪುಟ ಕಳೆದ ವಾರ ಅಸ್ತು ಎಂದಿತ್ತು. ಹೀಗಾಗಿ ಮುಖ್ಯಮಂತ್ರಿ ಇಂದು ತಮ್ಮ ಸಂಪುಟದ ಈ ನಿರ್ಧಾರವನ್ನು ಕಾನೂನಾತ್ಮಕವಾಗಿ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ ಎಲ್ಲರ ಅನುಮತಿಯೊಂದಿಗೆ ಇದೀಗ ಹೊಸ ಜಿಲ್ಲೆಯನ್ನು ಘೋಷಿಸಿದೆ. ಈ ಮೂಲಕ ಸಚಿವ ಆನಂದ್​ ಸಿಂಗ್ ಅವರ ಬಹುದಿನಗಳ ಕನಸು ನನಸಾದಂತಾಗಿದೆ.

 


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ