ಬೆಂಗಳೂರು,ಫೆ.8- ನಾಳೆ ನಡೆಯಲಿರುವ ವಿಧಾನಪರಿಷತ್‍ನ ಸಭಾಪತಿ ಚುನಾವಣೆಗೆ ಮಾಜಿ ಸಚಿವರಾದ ಬಸವರಾಜ್ ಹೊರಟ್ಟಿ ಹಾಗೂ ನಜೀರ್ ಅಹಮ್ಮದ್ ಸ್ಪರ್ಧೆಗಿಳಿದಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಹಾಗೂ ಕಾಂಗ್ರೆಸ್‍ನಿಂದ ನಜೀರ್ ಅಹಮ್ಮದ್ ನಾಮಪತ್ರ ಸಲ್ಲಿಸಿದ್ದು, ಚುನಾವಣೆ ನಾಳೆ ನಡೆಯಲಿದೆ. ಪರಿಷತ್‍ನ ಸಭಾಪತಿಯಾಗಿದ್ದ ಪ್ರತಾಪ್‍ಚಂದ್ರ ಶೆಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ.ಈಗಿನ ಪರಿಷತ್ ಬಲಾಬಲದ ಪ್ರಕಾರ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಸವರಾಜ್ ಹೊರಟ್ಟಿ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ. ಕಡೇ ಕ್ಷಣದಲ್ಲೇನಾದರೂ ಪವಾಡ ನಡೆದರೆ ಮಾತ್ರ ಕಾಂಗ್ರೆಸ್‍ನ ನಜೀರ್ ಅಹಮ್ಮದ್ ಅದೃಷ್ಟ ಒಲಿಯಬಹುದು. ಆದರೆ ಅಂತಹ ಯಾವುದೇ ಸಾಧ್ಯತೆಯ ಲಕ್ಷಣಗಳು ಕಂಡುಬರುತ್ತಿಲ್
Laxmi News 24×7