Breaking News
Home / Uncategorized / ಖಾತೆ ಬಗ್ಗೆ ಅಸಮಾಧಾನ ಹೊರಹಾಕಿದ ಅರವಿಂದ ಲಿಂಬಾವಳಿ

ಖಾತೆ ಬಗ್ಗೆ ಅಸಮಾಧಾನ ಹೊರಹಾಕಿದ ಅರವಿಂದ ಲಿಂಬಾವಳಿ

Spread the love

ಚಾಮರಾಜನಗರ (ಫೆ.07)  ಸಚಿವ ಸಂಪುಟ ವಿಸ್ತರಣೆ ನಂತರ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎಲ್ಲವು ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗಗೊಂಡಿದೆ. ಅರಣ್ಯ ಖಾತೆ ನೀಡಿರುವುದಕ್ಕೆ ಸಚಿವ ಅರವಿಂದ ಲಿಂಬಾವಳಿ ಪರೋಕ್ಷವಾಗಿ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. 

ಚಾಮರಾಜನಗರದಲ್ಲಿ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ನನಗೆ ಎರಡು ಖಾತೆ ಕೊಟ್ಟಿದ್ದಾರೆ. ರಾತ್ರಿ ಹೊತ್ತು ಕಾಡಿನಲ್ಲಿ ಇರಬೇಕು, ಹಗಲು ವೇಳೆ ನಾಡಿಗೆ ಬರಬೇಕು, ಕಾಡು ನಾಡು ಎರಡನ್ನೂ ನೋಡಿಕೊಳ್ಳುವ ಜವಬ್ದಾರಿಯನ್ನು ಹೊರಿಸಿದ್ದಾರೆ. ನಾನು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಇಲಾಖೆಯ ಸುರೇಶ್ ಕುಮಾರ್ ಅವರ ಜೊತೆಗೆ ಶಿಕ್ಷಣ ಸಚಿವನಾಗುತ್ತೇನೆ ಎಂದುಕೊಂಡಿದ್ದೆ. ಅವರ ಜೊತೆಗಾರನಾಗಿ ಕಳುಹಿಸುತ್ತಾರೆ ಎಂದುಕೊಂಡಿದ್ದೆ ಎನ್ನುವ ಮೂಲಕ ಉನ್ನತ ಶಿಕ್ಷಣ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಇದ್ದುದ್ದನ್ನು ವ್ಯಕ್ತಪಡಿಸಿದರು.

ನನಗೆ  ನೀಡಿರುವ  ಎರಡು  ಹೊಸ ಖಾತೆಗಳನ್ನ ನಿಭಾಯಿಸಿಲು ದಿನದ 24 ಗಂಟೆ ಬೇಕು. ಕಾಡಿಗೆ ರಾತ್ರಿ ವೇಳೆ ಹೋದರೆ ಮಾತ್ರ ಅಲ್ಲಿನ ಪರಿಸ್ಥಿತಿ ಗೊತ್ತಾಗುತ್ತದೆ. ಪ್ರಾಣಿಗಳು ಓಡಾಡುವುದೆ ರಾತ್ರಿ ವೇಳೆ ಎಂದ ಅವರು,  ನಾನು ಮೂಲತಃ ಸಿವಿಲ್ ಎಂಜಿನಿಯರ್, ಕಾಡಿನ ಎಂಜಿನಿಯರ್ ಅಲ್ಲ. ಸಾಮಾನ್ಯ ಜನರಿಗೆ  ಕಾಡಿನ ಬಗ್ಗೆ  ಇರುವಷ್ಟು ತಿಳುವಳಿಕೆಯು ನನಗೆ ಇಲ್ಲ, ಎಂದು ಅಸಮಧಾನ ತೋಡಿಕೊಂಡರು.

ಸಮಾರಂಭ ಮುಗಿದ ನಂತರ ವೇದಿಕೆಯಿಂದ ಹೊರಬಂದ ಸಚಿವ ಅರವಿಂದ ಲಿಂಬಾವಳಿ ಅವರನ್ನು ಖಾತೆ ಅಸಮಾಧನದ ಬಗ್ಗೆ ಪ್ರಶ್ನಿಸಿದಾಗ,   ಥ್ಯಾಂಕ್ಸ್ ಎಂದಷ್ಟೇ ಹೇಳಿ ಕೋಪಿಸಿಕೊಂಡು ಹೊರಡುವ ಮೂಲಕ ಮತ್ತೊಮ್ಮ ತಮ್ಮ ಅತೃಪ್ತಿ ಹೊರಹಾಕಿದರು


Spread the love

About Laxminews 24x7

Check Also

ಗರ್ಭಿಣಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಇಬ್ಬರಿಗೆ ಗಲ್ಲು ಶಿಕ್ಷೆ

Spread the loveವಿಜಯಪುರ: 9 ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿದ್ದ ಮರ್ಯಾದಾ ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ