Breaking News

ಕರ ವಸೂಲಿಗಾರ ಹಾಗೂ ಗುಮಾಸ್ತರಿಗೆ ಭಡ್ತಿ ನೀಡಲು ಕ್ರಮ: ಕೆ.ಎಸ್‌. ಈಶ್ವರಪ್ಪ

Spread the love

ಬೆಂಗಳೂರು: ಜಿಲ್ಲಾ ಪಂಚಾಯಿತಿ ವತಿಯಿಂದ ಅನುಮೋದನೆಗೊಂಡು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ ಹಾಗೂ ಗುಮಾಸ್ತರಿಗೆ ಭಡ್ತಿ ನೀಡುವ ಕುರಿತಾಗಿ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕರವಸೂಲಿಗಾರ ಹಾಗೂ ಗುಮಾಸ್ತ ಹುದ್ದೆಯಲ್ಲಿ 20 ರಿಂದ 25 ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ ಮುಂಬಡ್ತಿ ಸಿಕ್ಕಿಲ್ಲ ಎಂಬ ದೂರು ಬಹುತೇಕ ಶಾಸಕರದ್ದಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ನಂಜೇಗೌಡ, ಕೋಲಾರ ಜಿಲ್ಲೆಯಲ್ಲಿ 197 ಕರ ವಸೂಲಿಗಾರರು ಹಾಗೂ ಗುಮಾಸ್ತರು ಕೆಲಸ ಮಾಡುತ್ತಿದ್ದು, ಕೆಲವರು ನಿವೃತ್ತಿ ಅಂಚಿನಲ್ಲಿದ್ದಾರೆ. ಜೀವನ ಪೂರ್ತಿ ಕೆಲಸ ಮಾಡಿದರೂ ಒಂದೇ ಒಂದು ಭಡ್ತಿ ಸಿಕ್ಕಿಲ್ಲ. ಆರ್ಥಿಕವಾಗಿಯೂ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್‌ನ ಶಿವಲಿಂಗೇಗೌಡರು ಇದಕ್ಕೆ ಧ್ವನಿಗೂಡಿಸಿ, ರಾಜ್ಯದ ಎಲ್ಲೆಡೆ ಇಂತಹ ಸಮಸ್ಯೆ ಇದೆ. ಅವರಿಗೆ ಭಡ್ತಿ ನೀಡುವುದರಿಂದ ಆರ್ಥಿಕವಾಗಿಯೂ ದೊಡ್ಡ ಹೊರೆ ಆಗುವುದಿಲ್ಲ. ನಿಮ್ಮ ಕಾಲದಲ್ಲಿ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಿ ಎಂದು ಹೇಳಿದರು.


Spread the love

About Laxminews 24x7

Check Also

ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ BRP?*

Spread the love ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ