Breaking News
Home / Uncategorized / ಪ್ರತಿಭಟನಾ ಸ್ಥಳದಲ್ಲಿ ಮತ್ತೆ ರೈತರ ಜಮಾವಣೆ.. ಗಾಜಿಪುರ್ ಬಾರ್ಡರ್ ಕ್ಲೋಸ್

ಪ್ರತಿಭಟನಾ ಸ್ಥಳದಲ್ಲಿ ಮತ್ತೆ ರೈತರ ಜಮಾವಣೆ.. ಗಾಜಿಪುರ್ ಬಾರ್ಡರ್ ಕ್ಲೋಸ್

Spread the love

ನವದೆಹಲಿ: ದೆಹಲಿ- ಉತ್ತರಪ್ರದೇಶ ನಡುವಿನ ಗಡಿ ಪ್ರದೇಶ ಗಾಜಿಪುರ್ ಬಾರ್ಡರ್​ನಲ್ಲಿ ರಾತ್ರೋರಾತ್ರಿ ಮತ್ತೆ ರೈತರು ಜಮಾವಣೆಗೊಂಡಿದ್ದಾರೆ. ಉತ್ತರಪ್ರದೇಶದ ಮುಜಾಫ್ಪರ್​ನಗರ್​ನಿಂದ ರೈತರ ದಂಡು ಹರಿದುಬಂದ ಹಿನ್ನೆಲೆ ಗಾಜಿಪುರ್ ಬಾರ್ಡರ್​ ಕ್ಲೋಸ್ ಆಗಿದೆ.

ಗಾಜಿಪುರ್​ ಬಾರ್ಡರ್ ಕ್ಲೋಸ್ ಆದ ಹಿನ್ನೆಲೆ ರಸ್ತೆ ಮಾರ್ಗವನ್ನ NH-24, NH-9, ರಸ್ತೆ ನಂಬರ್ 56, 57A, ಕೊಂಡ್ಲಿ, ಪೇಪರ್ ಮಾರ್ಕೆಟ್, ಟೆಲ್ಕೋ ಟಿ ಪಾಯಿಂಟ್, EDM ಮಾಲ್, ಅಕ್ಷರಧಾಮ್, ನಿಜಾಮುದ್ದೀನ್ ಖಟ್ಟಾ ಕಡೆಗೆ ಬದಲಿಸಲಾಗಿದೆ. ವಿಕಾಸ್ ಮಾರ್ಗ ಸೇರಿದಂತೆ ಬಾರ್ಡರ್​​ನಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ವರದಿಯಾಗಿದೆ.

ಇನ್ನು ಸಿಂಘು, ಔಚಂಡಿ, ಮಂಗೇಶ್, ಸಬೋಲಿ, ಪಿಯಾವು ಮಣಿಯಾರಿ ಬಾರ್ಡರ್​​ಗಳೂ ಸಹ ಬಂದ್ ಆಗಿದ್ದು ಲಂಪುರ್, ಸಫಿಯಾಬಾದ್, ಸಿಂಘು ಸ್ಕೂಲ್ ಮತ್ತು ಪಲ್ಲ ಟೋಲ್ ಟ್ಯಾಕ್ಸ್ ಬಾರ್ಡರ್​ಗಳನ್ನ ತೆರೆಯಲಾಗಿದೆ. NH44 ಬಳಿ ಟ್ರಾಫಿಕ್ ಡೈವರ್ಟ್ ಮಾಡಲಾಗಿದ್ದು ಔಟರ್ ರಿಂಗ್ ರೋಡ್, GTK ರೋಡ್ ಮತ್ತು NH44 ಮಾರ್ಗಗಳನ್ನು ಅವಾಯ್ಡ್ ಮಾಡಿ ಎಂದು ದೆಹಲಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.


Spread the love

About Laxminews 24x7

Check Also

ನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ

Spread the loveನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಹುಬ್ಬಳ್ಳಿ, ಏಪ್ರಿಲ್ 28: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ