Breaking News

ರೈತರು ಭಯೋತ್ಪಾಕರೇ ಹೊಟ್ಟೆಗೆ ಅನ್ನ ತಿನ್ನೋ ಜನರು ಆಡೋ ಮಾತುಗಳೇ?: ಕೋಡಿ ಕಿಡಿ

Spread the love

ಬೆಂಗಳೂರು; “ಬಿಜೆಪಿ ನಾಯಕರು ರೈತರಿಗೆ ಪಾಕಿಸ್ತಾನ, ಖಲಿಸ್ತಾನಿಗಳ ಬೆಂಬಲ ಇದೆ ಅಂತ ಬೊಬ್ಬೆ ಇಡೋಕೆ‌ ಶುರುಮಾಡಿದ್ದಾರೆ. ರೈತರನ್ನೇ ದೇಶದ್ರೋಹಿಗಳು ಅಂತ ಕರೆಯೋ ಕಾಲ ಬಂದಿದೆ. ರೈತರಿಗೆ ಪಾಕಿಸ್ತಾನದ ನಂಟು ಅಂತ ಆರೋಪ ಹೊರಿಸುತ್ತಿದ್ದಾರೆ. ಇದು ಹೊಟ್ಟೆಗೆ ಅನ್ನ ತಿನ್ನೋ ಜನರು ಆಡೋ ಮಾತುಗಳೇ? ನಿಮಗೆ ಎಲ್ಲಿಲ್ಲದ ದುರಹಂಕಾರ ಬರೋಕೆ ಕಾರಣ ರೈತರೇ. ಹೊತ್ತು ಬಿತ್ತು ಅನ್ನ ಹಾಕಿದ್ದೀವಲ್ವಾ.? ಅದಕ್ಕೆ ಹೀಗೆ ಮಾತನಾಡುತ್ತಿದ್ದೀರ. ಇನ್ನೂ ನಮ್ಮ ಕೃಷಿ ಮಂತ್ರಿಗೆ ನೆಟ್ಟಗೆ ಮಾತಾಡೋಕೆ ಬರಲ್ಲ. ಇಂಥವರನ್ನು ಯಡಿಯೂರಪ್ಪ ಕ್ಯಾಬಿನೆಟ್​ನಲ್ಲಿ ಇಟ್ಟುಕೊಂಡಿದ್ದಾರೆ. ರೈತರು ಹೋರಾಟ ಮಾಡಿದ್ರೆ ಅಂಥವರ ವಿರುದ್ಧ ಹರಕಲು ಬಾಯಿ ಸಚಿವರನ್ನು ಮುಂದೆ ಬಿಡ್ತಾರೆ. ಯಡಿಯೂರಪ್ಪನವರೇ ಎಚ್ಚರಿಕೆ ಇರಲಿ, ನಿಮ್ಮ ಸಚಿವರು ಬೇಕಾ ಬಿಟ್ಟಿ ಮಾತನಾಡಿದರೆ ನಿಮ್ಮ ಮರಿಯಾದೆಯನ್ನು ನೀವೇ ಕಳೆದುಕೊಳ್ತೀರಿ” ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಇಂದು ದೇಶದಾದ್ಯಂತ ರೈತ ಹೋರಾಟ ಹಮ್ಮಿಕೊಳ್ಳಲಾಗಿದೆ. ದೆಹಲಿಯಲ್ಲಿ ರೈತರು ಕೆಂಪುಕೋಟೆಯನ್ನು ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಿಗೆ ಕೊಪ್ಪಳದಲ್ಲಿ ಹೇಳಿಕೆ ನೀಡಿದ್ದ ಸಚಿವ ಬಿ.ಸಿ. ಪಾಟೀಲ್, “ಇದು ರೈತರ ಪ್ರತಿಭಟನೆಯಲ್ಲ ಬದಲಿಗೆ ಭಯೋತ್ಪಾದಕರ ಕೃತ್ಯ. ಇದರ ಹಿಂದೆ ಕಲಿಸ್ತಾನಿಗಳು ಮತ್ತು ಕಾಂಗ್ರೆಸ್​ ಕೈವಾಡವಿದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸಚಿವರ ಈ ಹೇಳಿಕೆಗೆ ರಾಜ್ಯದ ವಿವಿಧ ರೈತ ಸಂಘಟನೆಗಳು ಇಂದು ಒಂದಾಗಿ ಸಂಯುಕ್ತ ಹೋರಾಟ ಕರ್ನಾಟಕ ಹೆಸರಿನಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಮಾವೇಶದಲ್ಲಿ ಕಿಡಿಕಾರಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​, “ರೈತ ಹೋರಾಟಗಾರರು ಸ್ವಾಭಿಮಾನಿಗಳು. ಆದರೆ, ಕೆಲ ಬಿಜೆಪಿ ನಾಯಕರು ರೈತರನ್ನು ಭಯೋತ್ಪಾದಕರಿಗೆ ಹೋಲಿಸುತ್ತಿದ್ದಾರೆ. ರೈತ ಹೋರಾಟಗಾರರಿಗೆ ಖಲಿಸ್ತಾನಿಗಳ ಮತ್ತು ಪಾಕಿಸ್ತಾನಿಗಳ ಸಹಾಯವಿದೆ ಎಂದು ಆಧಾರವಿಲ್ಲದೆ ಬೊಬ್ಬೆ ಹೊಡೆಯುತ್ತಿದ್ದಾರೆ.

ಅಸಲಿಗೆ ಇದು ಹೊಟ್ಟೆಗೆ ಅನ್ನ ತಿನ್ನೋ ಜನರು ಆಡೋ ಮಾತುಗಳೇ? ನಿಮಗೆ ಎಲ್ಲಿಲ್ಲದ ದುರಹಂಕಾರ ಬರೋಕೆ ಕಾರಣ ರೈತರೇ. ಹೊತ್ತು ಬಿತ್ತು ಅನ್ನ ಹಾಕಿದ್ದೀವಲ್ವಾ.? ಅದಕ್ಕೆ ನಮ್ಮದೇ ಅನ್ನ ತಿಂದು ನಮ್ಮನ್ನೇ ಭಯೋತ್ಪಾದಕರು ಎಂದು ಹೀಯಾಳಿಸುತ್ತೀರಾ? ಮಾಜಿ ಪ್ರಧಾನಿ ದಿವಂಗತ ಇಂದಿರ ಗಾಂಧಿಯೂ ರೈತರಿಗೆ ಅನ್ಯಾಯ ಮಾಡಿದ್ದಾರೆ. ಈಗ ಅದನ್ನೇ ನರೇಂದ್ರ ಮೋದಿಯೂ ಮಾಡ್ತುದ್ದಾರೆ ರೈತರ ಕತ್ತು ಹಿಡಿದು ಹೊರಗೆ ತಳ್ಳೋ ದೃಶ್ಯಗಳನ್ನು ನಾವಿಂದು ನೋಡುತ್ತಿದ್ದೇವೆ. ಮೋದಿಯವರ ಮಂಕಿಬಾತ್ ನಲ್ಲಿ‌ ಒಂದು ಮಾತಾದಾರೂ ರೈತರ ಬಗ್ಗೆ ಮಾತಾಡಿದ್ದಾರಾ..?” ಎಂದು ಕೋಡಿಹಳ್ಳಿ ಚಂದ್ರಶೇಕರ್​ ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ