ಬೆಳಗಾವಿ : ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಒಡೆತನದ ಬೆಳಗಾಂ ಶುಗರ್ಸ ಪ್ರೈ ಲಿ , ಆವರಣದಲ್ಲಿ 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಇಂದು ಅದ್ದೂರಿಯಾಗಿ ಆಚರಿಸಿದರು.
ಪ್ರಸಕ್ತ 2020-21 ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗೆ ಹೆಚ್ಚು ಕಬ್ಬನ್ನು ಸಾರಿಗೆ ಮಾಡಿದ ಮುಕ್ತೆದಾರರಾದ ಕಾಶಿನಾಥ ನಿಂಗಪ್ಪಾ ಕರಗುಪ್ಪಿ ಹಾಗೂ ಫಕೀರಪ್ಪಾ ರುದ್ರಪ್ಪಾ ಕುರಬರ ಅವರು ಧ್ವಜಾರೋಹಣ ನೆರವೇರಿಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಸಿದ್ದಾರ್ಥ ವಾಡೆನ್ನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಮಹತ್ವ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ತಂದೆ-ತಾಯಿಯರ ಪಾತ್ರ ಹಾಗೂ ಇಂದಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಉದ್ಯಮಿಗಳಾಗಿ ದೇಶದ ಅಬಿವೃದ್ದಿಯ ಕಡೆಗೆ ಗಮನಹರಿಸಲು ತಿಳಿಸಿದರು.
ಕಾರ್ಖಾನೆಯ ಹಿರಿಯ ಉಪಾದ್ಯಕ್ಷ ಎಲ್.ಆರ್.ಕಾರಗಿ, ತಾತ್ರಿಂಕ ಉಪಾದ್ಯಕ್ಷ ಎ.ಎಸ್.ರಾಣಾ, ಹಾಗೂ ಕಾರ್ಖಾನೆಯ ಹಿರಿಯ ವ್ಯವಸ್ಥಾಪಕರುಗಳು, ಕಾರ್ಮಿಕ ಸಿಬ್ಬಂದಿ ಇದ್ದರು.
Laxmi News 24×7