Breaking News

ಸಂಬಳ ನೀಡದೇ ಸತಾಯಿಸಿದ್ದಕ್ಕೆ 5 ಬಸ್ ಗಳಿಗೆ ಬೆಂಕಿ ಯಿಟ್ಟ

Spread the love

ಮುಂಬೈ: ಕೊರೊನಾ ಸಂಕಷ್ಟದಿಂದ ಕಂಗೆಟ್ಟಿದ್ದರೂ ಸಂಬಳ ನೀಡದೇ ಸತಾಯಿಸಿದ್ದಕ್ಕೆ ಮಾಲೀಕನ ವಿರುದ್ಧ ಕೋಪಗೊಂಡ ಬಸ್ ಚಾಲಕನೊಬ್ಬ 5 ಬಸ್ ಗಳಿಗೆ ಬೆಂಕಿ ಹಚ್ಚಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಆರೋಪಿ ಬಸ್ ಚಾಲಕ 24 ವರ್ಷದ ಅಜಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಆತ್ಮಾರಾಂ ಟ್ರ್ಯಾವಲ್ಸ್ ಬಸ್ ನ 5 ಬಸ್ ಗಳು ಬೆಂಕಿಗಾಹುತಿಯಾಗಿದ್ದವು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಇದೀಗ ಸತ್ಯಬಯಲಾಗಿದೆ.

2020ರ ಡಿಸೆಂಬರ್ ನಲ್ಲಿ ಮೂರು ಬಸ್ ಗಳು ಹಾಗೂ 2021ರ ಜನವರಿ 21ರಂದು ಎರಡು ಬಸ್ ಗಳಿಗೆ ಬೆಂಕಿ ಹಚ್ಚಲಾಗಿದ್ದು, ಬಸ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದವು. ಅನುಮಾನಗೊಂಡ ಪೊಲೀಸರು ಆರಂಭದಲ್ಲಿ ಟ್ರಾವಲ್ ಏಜನ್ಸಿ ಮಾಲೀಕನನ್ನು ವಿಚಾರಣೆ ನಡೆಸಿದ್ದರು.

ಅಂತಿಮವಾಗಿ ಬಸ್ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕೊರೊನಾ ಸಮಯದಲ್ಲಿ ತಾತ್ಕಾಲಿಕವಾಗಿ ಬಸ್ ಚಾಲಕನಾಗಿ ನೇಮಕಗೊಂಡಿದ್ದ ಅಜಯ್, ಗೋವಾದ ಬಳಿ ಬಸ್ ಚಲಾಯಿಸುತ್ತಿದ್ದಾಗ ಅಪಘಾತವಾಗಿತ್ತು. ಹೀಗಾಗಿ ಬಸ್ ಮಾಲೀಕ ಅಜಯ್ ಗೆ ಸಂಬಳ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಅಜಯ್ ಬಸ್ ಗಳಿಗೆ ಬೆಂಕಿಯಿಟ್ಟಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.


Spread the love

About Laxminews 24x7

Check Also

ದೇವಾಲಯದ ಸುತ್ತ ಮಾಂಸಾಹಾರ ನಿಷೇಧ ನೋಟಿಸ್‌ ವಾಪಸ್​: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದಲ್ಲಿನ ಹೊನ್ನೇಶ್ವರ ದೇವಾಲಯದ ಸುತ್ತಲು ಪ್ರಾಣಿಗಳ ವಧೆ ಮತ್ತು ಮಾಂಸಾಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ