ಮಂಗಳೂರು, – ಮಂಗಳೂರಿನ ಬ್ರಾಂಡ್ ಹಾಳಾಗುವಂತಹ ದುಷ್ಕøತ್ಯ ನಡೆಸುವವರ ಬಗ್ಗೆ ಮಾಹಿತಿ ನೀಡುವಂತೆ ಮಂಗಳೂರಿನ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮಂಗಳೂರು ಸುಂದರ ನಗರ. ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಇಲ್ಲಿಗೆ ಹಲವಾರು ಮಂದಿ ಬರುತ್ತಾರೆ. ಮಂಗಳೂರಿಗೆ ಒಂದು ಬ್ರಾಂಡ್ ಇದೆ. ಅದನ್ನು ಹಾಳು ಮಾಡುವಂತೆ ಇತ್ತೀಚೆಗೆ ಕೆಲ ಕೃತ್ಯಗಳು ನಡೆಯುತ್ತಿವೆ. ಅದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆಕೆಲವು ವ್ಯಕ್ತಿಗಳು ಧಾರ್ಮಿಕ ಕೇಂದ್ರಗಳಿಗೆ ಆಕ್ಷೇಪಾರ್ಹ ವಸ್ತುಗಳನ್ನು ಎಸೆದು ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ 4-5 ಪ್ರಕರಣಗಳು ವರದಿಯಾಗಿದ್ದು, ಕೇಸು ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ. ಈ ಕೃತ್ಯಗಳಿಂದ ಮಂಗಳೂರಿನ ಬ್ರಾಂಡ್ ಹಾಳಾಗಲಿದೆ. ಅದಕ್ಕೆ ಅವಕಾಶ ನೀಡಬಾರದು ಎಂದಿದ್ದಾರೆ.
