ಬೆಂಗಳೂರು : ವಾಹನ ಸವಾರರಿಗೆ ರಸ್ತೆ ಮತ್ತು ಸಾರಿಗೆ ಸಚಿವಾಲಯ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಚಾಲನಾ ಪರವಾನಗಿಯನ್ನು ಆರ್ ಟಿಒ ಕಚೇರಿಗೆ ಹೋಗದೇ ಮನೆಯಲ್ಲೇ ನವೀಕರಿಸುವ ಸೌಲಭ್ಯವನ್ನು ನೀಡಿದೆ.
ಹೌದು, ಸಾರಿಗೆ ಸಚಿವಾಲಯದ ಅಧಿಕೃತ ವೆಬ್ ಸೈಟ್ https://parivahan.gov.in/ ಗೆ ಭೇಟಿ ನೀಡಿ. ಚಾಲನಾ ಪರವಾನಗಿ ನವೀಕರಿಸಬಹುದು. ಇದಕ್ಕಾಗಿ ಚಾಲನಾ ಪರವಾನಗಿ, ಪಾಸ್ ಪೋರ್ಟ್ ಗಾತ್ರದ ಫೋಟೋ, ಆಧಾರ್ ಕಾರ್ಡ್ ಅಪ್ಲೋಡ್ ಮಾಡಬೇಕು. ಇದಾದ 30 ದಿನದೊಳಗೆ ನಿಮ್ಮ ಮನೆ ವಿಳಾಸಕ್ಕೆ ಚಾಲನ ಪರವಾನಗಿ ಬರಲಿದೆ.
ಇನ್ನು 40 ವರ್ಷ ಮೇಲ್ಪಟ್ಟವರು ತಮ್ಮ ಚಾಲನಾ ಪರವಾನಗಿ ಅವಧಿ ಮುಗಿದಿದ್ದರೆ, ಆನ್ ಲೈನ್ ನವೀಕರಣ ಮಾಡಲು ಫಾರ್ಮ್-1 ಎ ಭರ್ತಿ ಮಾಡುವ ಜೊತೆಗೆ ವೈದ್ಯರಿಂದ ಪ್ರಮಾಣಿಕರಿಸಬೇಕು. ಸಾರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಈ ಫಾರ್ಮ್ ಸಿಗಲಿದೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಸ್ತೆ ಮತ್ತು ಸಾರಿಗೆ ಸಚಿವಾಲಯ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಮಾನ್ಯತೆಯನ್ನು ಮಾರ್ಚ್ 31 ರವರೆಗೆ ವಿಸ್ತರಿಸಿದೆ.
Laxmi News 24×7