ಮೊಬೈಲ್ ಇಂದು ಜನಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಇಲ್ಲದಿದ್ದರೆ ಜೀವನ ನಡೆಯುವುದೇ ಇಲ್ಲವೇನೋ ಎಂಬಷ್ಟರಮಟ್ಟಿಗೆ ಬಹುತೇಕರು ಅದರ ಮೇಲೆ ಅವಲಂಬಿತರಾಗಿದ್ದಾರೆ. ಇದೇ ಮೊಬೈಲ್ ವಿಚಾರ ಈಗ ಗೃಹಿಣಿಯೊಬ್ಬರ ಸಾವಿಗೆ ಕಾರಣವಾಗಿದೆ.
ಹೊಸಕೋಟೆ ತಾಲೂಕು ತಾವರೆಕೆರೆ ನಿವಾಸಿ 23ವರ್ಷದ ಸುಶ್ಮಿತಾ ಸಾವಿಗೀಡಾದ ಗೃಹಿಣಿಯಾಗಿದ್ದು, ಈಕೆ ಹಾಗೂ ಪತಿ ರಘು ನಡುವೆ ಮೊಬೈಲ್ ಬಳಕೆ ಕುರಿತಂತೆ ಪದೇ ಪದೇ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ಶನಿವಾರ ರಾತ್ರಿ ಇದೇ ವಿಚಾರಕ್ಕೆ ಮತ್ತೊಮ್ಮೆ ಜಗಳವಾಗಿದ್ದು, ಇದು ವಿಕೋಪಕ್ಕೆ ತಿರುಗಿದ ವೇಳೆ ರಘು ತನ್ನ ಪತ್ನಿ ಸುಶ್ಮಿತಾಳಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಇದೀಗ ಪೊಲೀಸರು ಆರೋಪಿ ರಘುವನ್ನು ಬಂಧಿಸಿದ್ದಾರೆ
 Laxmi News 24×7
Laxmi News 24×7
				 
		 
						
					