Breaking News
Home / ರಾಜ್ಯ / ಬೇಟಿ ಬಚಾವೊ’, ‘ಮಿಷನ್ ಶಕ್ತಿ’ ಪೊಳ್ಳು ಘೋಷಣೆ: ಪ್ರಿಯಾಂಕಾ ಗಾಂಧಿ ವಾದ್ರಾ

ಬೇಟಿ ಬಚಾವೊ’, ‘ಮಿಷನ್ ಶಕ್ತಿ’ ಪೊಳ್ಳು ಘೋಷಣೆ: ಪ್ರಿಯಾಂಕಾ ಗಾಂಧಿ ವಾದ್ರಾ

Spread the love

ಹೊಸದಿಲ್ಲಿ, : ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರ ಮಹಿಳೆಯರ ಭದ್ರತೆ ಕುರಿತು ಪ್ರಚಾರ ನಡೆಸಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತದೆ. ಆದರೆ, ತಳ ಮಟ್ಟದಲ್ಲಿ ಈ ವಿಷಯದ ಬಗ್ಗೆ ನಿರ್ಲಕ್ಷ್ಯದ ಮನೋಭಾವ ಹೊಂದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಹಿಂದಿ ಪೋಸ್ಟ್‌ನಲ್ಲಿ ಪ್ರಿಯಾಂಕಾ ಗಾಂಧಿ, ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆದ ಅಪರಾಧದ ಕುರಿತ ಇತ್ತೀಚೆಗಿನ ವರದಿಯನ್ನು ಉಲ್ಲೇಖಿಸಿದ್ದಾರೆ. ”ಬೇಟಿ ಬಚಾವೊ” ಹಾಗೂ ‘ಮಿಷನ್ ಶಕ್ತಿ’ ಉತ್ತರಪ್ರದೇಶ ಸರಕಾರದ ಕೇವಲ ಪೊಳ್ಳು ಘೋಷಣೆಗಳು ಎಂದು ಅವರು ಹೇಳಿದ್ದಾರೆ. ”ಉತ್ತರಪ್ರದೇಶದ ಸರಕಾರ ಮಹಿಳೆಯರ ಭದ್ರತೆಯ ಮಿಷನ್ ಶಕ್ತಿ ಹೆಸರಲ್ಲಿ ತಪ್ಪು ಪ್ರಚಾರಕ್ಕೆ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ, ತಳ ಮಟ್ಟದಲ್ಲಿ ಮಹಿಳೆಯರ ಭದ್ರತೆ ಬಗ್ಗೆ ನಿರ್ಲಕ್ಷ್ದ ಮನೋಭಾವ ಹೊಂದಿದೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ, ಗೋರಖ್‌ಪುರದಲ್ಲಿ ಇತ್ತೀಚೆಗೆ 12 ಮಹಿಳೆಯರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ ಎಂದರು. ”ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ಪ್ರತಿ ದಿನ ಸರಾಸರಿ 165 ಅಪರಾಧಗಳು ಸಂಭವಿಸುತ್ತಿವೆ. ಇತ್ತೀಚೆಗೆ ನೂರಾರು ಪ್ರಕರಣಗಳು ಬೆಳಕಿಗೆ ಬಂದವು. ಆದರೆ, ಆಡಳಿತ ಸಂತ್ರಸ್ತರ ಮಾತನ್ನು ಆಲಿಸಲಿಲ್ಲ. ಅವರು ದೂರುದಾರರೊಂದಿಗೆ ದುರ್ನಡತೆ ತೋರಿದರು” ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.

ಮಹಿಳೆಯರ ಭದ್ರತೆ ಹೆಸರಲ್ಲಿ ಜಾಹೀರಾತಿಗೆ ಉತ್ತರಪ್ರದೇಶ ಸರಕಾರ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ, ಮಹಿಳೆಯರು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದರೆ, ಅವರ ಬಗೆ ತುಚ್ಛವಾಗಿ ಮಾತನಾಡಲಾಗುತ್ತದೆ. ಅವರ ಬಗ್ಗೆ ಅನುಕಂಪ ತೋರುವ ಬದಲು ಅಗೌರವ ತೋರಿಸಲಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ