ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಕೇಂದ್ರ ಆಯುಷ್ ಖಾತೆ ರಾಜ್ ಸಚಿವ ಶ್ರೀಪಾದ ನಾಯಕ ಅವರನ್ನು ಪಣಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
Laxminews 24x7
ಜನವರಿ 12, 2021
Uncategorized
312 Views
ಅಂಕೋಲಾ – ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಕೇಂದ್ರ ಆಯುಷ್ ಖಾತೆ ರಾಜ್ ಸಚಿವ ಶ್ರೀಪಾದ ನಾಯಕ ಅವರನ್ನು ಪಣಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಅಂಕೋಲಾದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಅಂಬುಲೆನ್ಸ್ ಮೂಲಕ ಗೋವಾಕ್ಕೆ ಕರೆದೊಯ್ಯಲಾಗಿದೆ.
ಸೋಮವಾರ ಸಂಜೆ ಅಂಕೋಲಾ ಬಳಿ ಸಚಿವರ ಕಾರು ಪಲ್ಟಿಯಾಗಿ ಪತ್ನಿ ವಿಜಯಾ ಮತ್ತು ಆಪ್ತಸಹಾಯಕ ದೀಪಕ್ ಸಾವಿಗೀಡಾಗಿದ್ದಾರೆ. ಸಚಿವರು ಗಾಯಗೊಂಡಿದ್ದಾರೆ.
ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುವಾಗ ಅಪಘಾತವಾಗಿದೆ.