Breaking News
Home / Uncategorized / ಅವಧಿಗೂ ಮುನ್ನ ಬಸ್ ಸಂಚಾರ; 2 ರಾಜ್ಯದ ಸಾರಿಗೆ ಇಲಾಖೆ ನೌಕರರ ನಡುವೆ ಜಟಾಪಟಿ

ಅವಧಿಗೂ ಮುನ್ನ ಬಸ್ ಸಂಚಾರ; 2 ರಾಜ್ಯದ ಸಾರಿಗೆ ಇಲಾಖೆ ನೌಕರರ ನಡುವೆ ಜಟಾಪಟಿ

Spread the love

ಯಾದಗಿರಿ:ಬಸ್ ಸಂಚಾರ ಮಾಡುವ ವಿಚಾರದಲ್ಲಿ ಎರಡು ರಾಜ್ಯದ ಸಾರಿಗೆ ಇಲಾಖೆ ನೌಕರರ ನಡುವೆ ವಾಕ್ಸಮರ ನಡೆದಿದೆ. ಅವಧಿ ಮುನ್ನವೇ ಬಸ್ ನಿಲ್ದಾಣದಲ್ಲಿ ತೆಲಂಗಾಣ ಬಸ್ ತೆಗೆದುಕೊಂಡು ಬಂದ ವಿಚಾರವಾಗಿ ತೆಲಂಗಾಣ ಹಾಗೂ ರಾಜ್ಯದ ಸಾರಿಗೆ ನೌಕರರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕಂಟ್ರೋಲರ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ನ ಕೇಂದ್ರ ಬಸ್ ನಿಲ್ದಾಣದಲ್ಲಿ ನಸುಕಿನ ಜಾವ ಘಟನೆ ಜರುಗಿದೆ. ಎರಡು ದಿನದ ಹಿಂದೆ ಘಟನೆ ಜರುಗಿದ್ದು ಈಗ ಗಲಾಟೆ ವಿಡಿಯೋ ವೈರಲ್ ಆಗಿದೆ.

ಈಶಾನ್ಯ ಸಾರಿಗೆ ಸಂಸ್ಥೆಯ ಗುರುಮಠಕಲ್ ವಿಭಾಗದ ಬಸ್ ಪರಗಿ ಮಾರ್ಗವಾಗಿ ಹೈದ್ರಾಬಾದ್ ಗೆ ತೆರಳಬೇಕಿತ್ತು. ಆದರೆ, ಗುರುಮಠಕಲ್ ವಿಭಾಗದ ಬಸ್ ತೆರಳುವ ಮುನ್ನವೇ ತೆಲಂಗಾಣದ  ಪರಗಿ ಡಿಪೋದ ಬಸ್ ಗುರುಮಠಕಲ್ ಬಸ್ ನಿಲ್ದಾಣಕ್ಕೆ ತರಲಾಗಿತ್ತು. ಪರಗಿ ಡಿಪೋದ ಬಸ್ ಚಾಲಕ ಹಾಗೂ ನಿರ್ವಾಹಕ ಗುರುಮಠಕಲ್ ಬಸ್ ನಲ್ಲಿ ಕುಳಿತ ಪ್ರಯಾಣಿಕರನ್ನು ಪರಗಿ ಬಸ್ ನೊಳಗೆ ಕೂರಿಸಿಕೊಂಡು ಬಸ್ ಸಂಚಾರ ಆರಂಭ ಮಾಡಿದನು. ಇದಕ್ಕೆ ಅಕ್ರೋಶಗೊಂಡ  ಗುರುಮಠಕಲ್ ಬಸ್ ಕಂಟ್ರೋಲರ್ ಮಧುಸೂದನ್ ಪ್ರಶ್ನೆ ಮಾಡಿ ಬಸ್ ತಡೆದಿದ್ದರು.ಅವಧಿಗೂ ಮುನ್ನ ಬಸ್ ಸಂಚಾರ; 2 ರಾಜ್ಯದ ಸಾರಿಗೆ ಇಲಾಖೆ ನೌಕರರ ನಡುವೆ ಜಟಾಪಟಿ


Spread the love

About Laxminews 24x7

Check Also

ಬೈಲಹೊಂಗಲ :ನರೇಗಾ ಕೆಲಸಕ್ಕೆ ಹೆಚ್ಚಿನ ಜನರು ಬರುವಂತೆ ಕರೆ- ವಿಜಯ ಪಾಟೀಲ.

Spread the loveಗ್ರಾಪಂ ಸುತಗಟ್ಟಿ ಮತ್ತು ದೇಶನೂರ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಗಳಿಗೆ ಇಂದು ಸಹಾಯಕ ನಿರ್ದೇಶಕ ವಿಜಯ ಪಾಟೀಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ