Breaking News

ಬೆಂಗಳೂರಿನ ಪ್ರಿಂಟಿಂಗ್ ಪ್ರೆಸ್​ನಲ್ಲಿ ಕೆಲಸ ಮಾಡುತ್ತಿದ್ದ ಆಕೆ ಬಾರ್ ಕ್ಯಾಷಿಯರ್ ಮನೆಯಲ್ಲಿ ಸಾವು!

Spread the love

ಬೆಂಗಳೂರು (ಜ. 8): ಆಕೆ ಪ್ರಿಂಟಿಂಗ್ ಪ್ರೆಸ್​ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಆ ದಿನ ಮನೆಗೆ ಪೋನ್ ಮಾಡಿ ಬರೋದು ತಡವಾಗುತ್ತದೆ ಎಂದು ಹೇಳಿದ್ದಳು. ಆದರೆ, ರಾತ್ರಿಯಾದರೂ ಅಮ್ಮ ಮನೆಗೆ ಬಾರದಿರುವುದನ್ನು ನೋಡಿ ಮಕ್ಕಳು ಪೊಲೀಸ್ ಠಾಣೆಗೆ ಮಿಸ್ಸಿಂಗ್ ದೂರು ಕೊಟ್ಟಿದ್ದರು. ಆ ಮಹಿಳೆಯ ಮೊಬೈಲ್ ಲೊಕೇಷನ್ ಜಾಡು ಹಿಡಿದು ಹೊರಟ ಪೊಲೀಸರಿಗೆ ಆಕೆ ಸಿಕ್ಕಿದ್ದು ಶವವಾಗಿ. ಯೆಸ್, ಈ ಮಹಿಳೆಯ ಹೆಸರು ಅರುಣ ಕುಮಾರಿ. 43 ವರ್ಷದ ಈಕೆ ಬೆಂಗಳೂರಿನ ಸುಂಕದಕಟ್ಟೆಯ ದಾಸರಹಳ್ಳಿ ನಿವಾಸಿ.

ಅರುಣ ಕುಮಾರಿ ನಿನ್ನೆ ಬೆಳಗ್ಗೆ ಮಾಗಡಿ ರಸ್ತೆಯ ಪ್ರಿಂಟಿಂಗ್ ಪ್ರೆಸ್ ಕೆಲಸಕ್ಕೆ ಹೋಗಿದ್ದು, ಮತ್ತೆ ಮನೆಗೆ ಬಂದಿರಲಿಲ್ಲ. ಹೆಚ್ಚಿನ‌ ಕೆಲಸ ಇದ್ದು ಮನೆಗೆ ತಡವಾಗಿ ಬರುವುದಾಗಿ ಸಂಜೆ ವೇಳೆ ಮನೆಯವರಿಗೆ ಹೇಳಿದ್ದರಂತೆ. ಅದರಂತೆ ರಾತ್ರಿಯವರೆಗೂ ಮನೆಯಲ್ಲಿದ್ದ ಪತಿ ಮತ್ತು ಮಕ್ಕಳು ಕಾದು ಕಾದು ಬಾರದೆ ಇದ್ದಾಗ ಕರೆ‌ ಮಾಡಿದ್ದಾರೆ. ಕರೆ ಸ್ವೀಕರಿಸದಿದ್ದಾಗ ಮಾಗಡಿ ರಸ್ತೆಯ ಪೊಲೀಸ್ ಠಾಣೆಗೆ ತೆರಳಿ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದಾರೆ.

Bangalore Murder: Bengaluru Woman Dead Body Found in Bar Cashier House Crime News.

ಮಿಸ್ಸಿಂಗ್ ದೂರು ದಾಖಲಿಸಿಕೊಂಡಿದ್ದ ಮಾಗಡಿ ಠಾಣಾ ಪೊಲೀಸರು ಪರಿಶೀಲಿಸಿದ ವೇಳೆ ಆ ಮೃತದೇಹ ಮಿಸ್ಸಿಂಗ್ ಆಗಿದ್ದ ಅರುಣ ಕುಮಾರಿಯದ್ದೇ ಅನ್ನೋದು ಕನ್ಫರ್ಮ್ ಆಗಿದೆ. ಕಾಮಾಕ್ಷಿ ಪಾಳ್ಯ ಠಾಣೆ ಪೊಲೀಸರು ಕೂಡಲೇ ವಿಕ್ಟೋರಿಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಶವವನ್ನು ರವಾನಿಸಿದ್ದಾರೆ. ಮಹಿಳೆ ಅರುಣ ಕುಮಾರಿ ಮೃತ ಪಟ್ಟ ಬಾಡಿಗೆ ಮನೆಯಲ್ಲಿ ಆ ಮನೆ ಸಮೀಪವೇ ಇದ್ದ ಬಾರ್ ಕ್ಯಾಷಿಯರ್ ನೆಲೆಸಿದ್ದ ಅನ್ನೋದು ಗೊತ್ತಾಗಿದೆ. ಕ್ಯಾಷಿಯರ್ ಆಗಿದ್ದ ಪ್ರವೀಣ್ ಗೋವಾದಲ್ಲಿ ತಲೆಮರೆಸಿಕೊಂಡಿದ್ದು  ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ಏರ್​ಗನ್​ನಿಂದ ಹಾರಿದ ಗುಂಡು: ಶಿರಸಿಯಲ್ಲಿ 9 ವರ್ಷದ ಬಾಲಕ ಸಾವು

Spread the love ಶಿರಸಿ(ಉತ್ತರಕನ್ನಡ): ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕನ ಕೈಯ್ಯಿಂದ ಏರ್​ಗನ್​ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಹೃದಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ