ಬೆಳಗಾವಿ: ಶಾಲೆ-ಕಾಲೇಜು ಪುನರಾರಂಭದ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಬೆಳಗಾವಿ, ಚಿಕ್ಕೋಡಿಯಲ್ಲಿ 20ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬೆಳಗಾವಿ ಗ್ರಾಮೀಣ ಭಾಗದ 9, ಬೆಳಗಾವಿ ನಗರ ವಲಯದ 4 , ಕಿತ್ತೂರು 1, ರಾಮದುರ್ಗದಲ್ಲಿ 3 ಶಿಕ್ಷಕರಿಗೆ ಸೇರಿದಂತೆ ಒಟ್ಟು 18 ಶಿಕ್ಷಕರಿಗೆ ಕೋವೀಡ್ ಸೊಂಕು ದೃಢವಾಗಿದೆ. ಹುಕ್ಕೇರಿಯ 2 , ರಾಯಬಾಗದ 2 ಶಿಕ್ಷಕರಿಗೆ ಸೊಂಕು ತಗುಲಿದ್ದು ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಶಿಕ್ಷಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 2,600 ಶಿಕ್ಷಕರನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿತ್ತು. ಸದ್ಯ ಕೆಲ ಶಿಕ್ಷಕರ ಪರೀಕ್ಷಾ ವರದಿ ಮಾತ್ರ ಬಂದಿದ್ದು, ಇನ್ನುಳಿದ ಶಿಕ್ಷಕರ ವರದಿ ಬರಬೇಕಾಗಿದೆ.
Laxmi News 24×7