ಬೆಂಗಳೂರು: ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಹತ್ವದ ಆದೇಶ ಹೊರಬಿದ್ದಿದ್ದು, ಥರ್ಡ್ ಪಾರ್ಟಿ ವಿಮೆಯಿಂದ ಅಪಘಾತಕ್ಕೀಡಾದವರಿಗೆ ಪರಿಹಾರ ನೀಡಲಾಗುವುದು. ಆದ್ರೆ, ಅಪಘಾತ ಮಾಡಿದ ವಾಹನದ ಹಿಂಬದಿ ಸವಾರ ಮತ್ತು ಸಹ ಪ್ರಯಾಣಿಕರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರ ಸಿಗುವುದಿಲ್ಲ. ಆದ್ರೆ, ಪ್ರತ್ಯೇಕ ವಿಮೆ ಮೊತ್ತ ಭರಿಸಿದ್ರೆ ಮಾತ್ರ ಹಿಂಬದಿ ಸವಾರ, ಸಹ ಪ್ರಯಾಣಿಕರಿಗೂ ಪರಿಹಾರ ಅನ್ವಯವಾಗುತ್ತೆ. ಇಲ್ಲವಾದರೆ ವಿಮೆ ಕಂಪನಿ ಪರಿಹಾರ ನೀಡಬೇಕಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಕಾನೂನಿನಡಿ ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿದ್ದು, ಖಾಸಗಿ ವಾಹನದ ಚಾಲಕ, ಸಹ ಪ್ರಯಾಣಿಕರ ವಿಮೆ ಐಚ್ಛಿಕ. ನ್ಯಾ. ಹಂಚಟೆ ಸಂಜೀವ್ ಕುಮಾರ್ ಅವರಿದ್ದ ಪೀಠ, ಅಪಘಾತದಲ್ಲಿ ಮೃತಪಟ್ಟರೆ ವಾಹನದ ಮಾಲೀಕನೇ ಹೊಣೆ ಎಂದು ಮಹತ್ವದ ತೀರ್ಪು ನೀಡಿದ್ದಾರೆ.
Laxmi News 24×7