Breaking News
Home / Uncategorized / ಬೆಳಗಾವಿಯಲ್ಲಿ ಕೊರೊನಾ ಲಸಿಕೆಯ ಡ್ರೈ ರನ್ ಆರಂಭ..ಆಶಾ ಕಾರ್ಯಕರ್ತೆಗೆ ಮೊದಲ ಡೆಮೊ

ಬೆಳಗಾವಿಯಲ್ಲಿ ಕೊರೊನಾ ಲಸಿಕೆಯ ಡ್ರೈ ರನ್ ಆರಂಭ..ಆಶಾ ಕಾರ್ಯಕರ್ತೆಗೆ ಮೊದಲ ಡೆಮೊ

Spread the love

ದೇಶಾಧ್ಯಂತ ಇಂದು ಕೊರೊನಾ ವ್ಯಾಕ್ಸಿನ್ ಡ್ರೈರನ್ ಆರಂಭಿಸಲಾಗಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯ 3 ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಯ ಡ್ರೈ ರನ್ ಆರಂಭವಾಗಿದೆ. ಮೊದಲು ಹತ್ತು ಜನರ ಮೇಲೆ ಲಸಿಕೆ ಡೆಮೊ ಮಾಡಲು ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದು. ವಂಟಮೂರಿ ನಗರ ಪ್ರಾಥಮಿಕ ಶಾಲೆಯಲ್ಲಿ ಮೊದಲಿಗೆ ಆಶಾ ಕಾರ್ಯರ್ತೆ ಮೇಲೆ ಡೆಮೊ ಮಾಡಲಾಯಿತು.

ಹೌದು ಬೆಳಗಾವಿಯ ವಂಟಮುರಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರ, ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ಮಾದರಿ ಕೊರೊನಾ ಲಸಿಕಾ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಕೋವಿನ್ ಆ್ಯಪ್‍ನಲ್ಲಿ ನೋಂದಣಿ ಮಾಡಿಸಿದ 25 ಜನರಿಗೆ ಡ್ರೈ ರನ್ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಒಟ್ಟು 28,195 ಆರೋಗ್ಯ ಕಾರ್ಯಕರ್ತರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆಕೋವಿಡ್ ಲಸಿಕಾ ಕೇಂದ್ರದಲ್ಲಿ ಒಂದು ಸೆಷನ್‍ಗೆ ಐವರು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಮೊದಲು ಲಸಿಕೆ ಪಡೆಯುವವರನ್ನು ವೇಟಿಂಗ್ ರೂಮ್‍ನಲ್ಲಿ ಕೂರಿಸುವ ಸಿಬ್ಬಂದಿ ಬಳಿಕ ಕೋವಿನ್ ಪೆÇೀರ್ಟಲ್‍ನಲ್ಲಿ ದಾಖಲಾತಿಗಳ ಪರಿಶೀಲನೆ ಬಳಿಕ ಲಸಿಕೆ ನೀಡುವ ಬಗ್ಗೆ ರಿಹರ್ಸಲ್ ಮಾಡಲಿದ್ದಾರೆ. ಲಸಿಕೆ ನೀಡಿದ ಬಳಿಕ ಲಸಿಕೆ ಪಡೆದ ಬಗ್ಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಲಸಿಕೆ ಪಡೆದವರನ್ನು ಆಬ್ಸರ್ವೇಷನ್ ರೂಮ್‍ನಲ್ಲಿ 30 ನಿಮಿಷಗಳ ಕಾಲ ನಿಗಾ ಇಡಲಾಗುತ್ತದೆ. ಲಸಿಕೆ ಪಡೆದವರ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ರೆ ಎಐಎಫ್‍ಐ ವಿಭಾಗಕ್ಕೆ ರವಾನೆ ಮಾಡಲಾಗುತ್ತದೆ. ಎಐಎಫ್‍ಐ ಎಂದರೆ ಅಡ್ವರ್ಸ್ ಇವೆಂಟ್ ಫಾಲೋವಿಂಗ್ ಇಮ್ಯುನೈಸೇಷನ್ ಎಂದರ್ಥ ಈ ಘಟಕದಲ್ಲಿ ಓರ್ವ ಅರವಳಿಕೆ ತಜ್ಞರು, ಇಬ್ಬರು ಸ್ಟಾಫ್ ನರ್ಸ್, ಓರ್ವ ಆ್ಯಂಬುಲೆನ್ಸ್ ಚಾಲಕನನ್ನು ನಿಯೋಜನೆ ಮಾಡಲಾಗಿದೆ. ಒಂದು ಘಂಟೆಯಲ್ಲಿ ಕೇವಲ 10 ಜನರಿಗೆ ಮಾತ್ರ ವ್ಯಾಕ್ಸಿನೇಷನ್ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ವಂಟಮೂರಿ ಕಾಲೋನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆಯ ಡ್ರೈ ರನ್ ಆರಂಭವಾಗಿದೆ. ತಾಲೂಕು ವೈದ್ಯಾಧಿಕಾರಿ ಸಂಜಯ್ ಡುಮ್ಮಗೋಳ ನೇತೃತ್ವದಲ್ಲಿ ಆರಂಭವಾಗಿದ್ದು, ಮೊದಲು ಹತ್ತು ಜನರ ಮೇಲೆ ಲಸಿಕೆ ಡೆಮೊ ಮಾಡಲಾಗಿದ್ದು. ಓರ್ವ ಆಶಾ ಕಾರ್ಯಕರ್ತೆ ಮೇಲೆ ಮೊದಲು ಡೆಮೊ ಮಾಡಲಾಯಿತು. ನಂತರ ಇನ್ನುಳಿದವರಿಗೂ ಇಂಜಕ್ಷನ್ ನೀಡಲಾಯಿತು.

ಈ ಬಗ್ಗೆ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಡಾ.ಈಶ್ವರ ಗಡಾದ ಅವರು ಹೆಚ್ಚಿನ ಮಾಹಿತಿ ನೀಡಿದರು. ವಾ.ಓ: ಈ ಬಗ್ಗೆ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಡಾ.ಈಶ್ವರ ಗಡಾದ ಅವರು ಮಾತನಾಡಿ ಕೊರೊನಾ ಲಸಿಕೆ ಶೀಘ್ರವೇ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಕೊರೊನಾ ವ್ಯಾಕ್ಸಿನ್‍ನ್ನು ಯಾವ ರೀತಿ ಕೊಡಬೇಕು ಎಂಬ ಕುರಿತು ಒಂದು ಟ್ರೈಯಲ್ ಮಾಡುತ್ತಿದ್ದೇವೆ. ಲಸಿಕೆ ಬಂದ ನಂತರ ಯಾವ ರೀತಿ ಮಾಡಲಾಗುತ್ತದೆ ಎಂಬ ಕುರಿತು ಅಣುಕು ಪ್ರದರ್ಶನ ಮಾಡುತ್ತಿದ್ದೇವೆ ಎಂದು ಹೆಚ್ಚಿನ ಮಾಹಿತಿ ನೀಡಿದರು.

ಕೊವ್ಯಾಕ್ಸಿನ್ ತೆಗೆದುಕೊಳ್ಳಲು ಆಗಮಿಸಿದ್ದ ನರ್ಸ್ ಒಬ್ಬರು ಮಾತನಾಡಿ ಆಧಾರ್ ಕಾರ್ಡ, ಪ್ಯಾನ್‍ಕಾರ್ಡ ತೆಗೆದುಕೊಂಡು ಆನ್‍ಲೈನ್‍ನಲ್ಲಿ ಅರ್ಜಿ ಹಾಕಿದ್ದೇವು. ಸಾಮಾಜಿಕ ಅಂತರದ ಮೂಲಕ ಆಗಮಿಸಿ ಮುಂಜಾಗ್ರತಾ ಕ್ರಮಗಳೊಂದಿಗೆ ಇಂಜೆಕ್ಷನ್ ತೆಗೆದುಕೊಂಡಿದ್ದೇವೆ. ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಎಲ್ಲರೂ ವ್ಯಾಕ್ಸಿನ್ ತೆಗೆದುಕೊಳ್ಳಬಹುದು ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆ ಸಂಗೀತಾ ಬಸವಣೆಪ್ಪ ಕೂಪಾಟೆ ಮಾತನಾಡಿ ಆರಂಭದಲ್ಲಿ ನಮಗೆ ಏನು ಮಾಡುತ್ತಾರೆ ಎಂದು ಅಂಜಿಕೆ ಆಗಿತ್ತು. ಈಗ ಇಂಜೆಕ್ಷನ್ ಕೊಟ್ಟಿದ್ದಾರೆ. ಇಂಜಕ್ಷನ್ ಕೊಟ್ಟ ಬಳಿಕ ರೂಮ್‍ನಲ್ಲಿ ಕೂಡ್ರಿಸಿದ್ದಾರೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಒಟ್ಟಾರೆ ದೇಶಾಧ್ಯಂತ ಕೊರೊನಾ ವ್ಯಾಕ್ಸಿನ್ ಡ್ರೈರನ್ ಆರಂಭವಾಗಿದ್ದು. ಬೆಳಗಾವಿಯಲ್ಲಿಯೂ ಆರಂಭವಾಗಿದೆ. ಮೊದಲು ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿರುವ ಆರೋಗ್ಯ ಕಾರ್ಯಕರ್ತರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಡೆಮೊ ಮಾಡಲಾಗುತ್ತಿದ್ದು. ಅತ್ಯಂತ ವ್ಯವಸ್ಥಿತವಾಗಿ ಕೋವಿಡ್ ನಿಯಮ ಅನುಸಾರ ವ್ಯಾಕ್ಸಿನ್ ಡ್ರೈರನ್ ಮಾಡುತ್ತಿರುವುದು ಕಂಡು ಬಂದಿದೆ.


Spread the love

About Laxminews 24x7

Check Also

ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮ ಬಲಿ

Spread the love ಬೆಳಗಾವಿ: ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮ (Baby Death) ಬಲಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ