ಬೆಳಗಾವಿ: ಬೆಳಗಾವಿ ಚೆನ್ನಮ್ಮವೃತ್ತದಲ್ಲಿ ಪ್ರತಿಮೆ ಬಳಿಯಿರುವ ಕನ್ನಡ ಧ್ವಜ ಕಂಬ ಇದ್ದಕ್ಕಿದ್ದಂತೆ ಕಿರಿದಾದ ಘಟನೆ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಇದು ಕಿಡಿಗೇಡಿಗಳ ಕೃತ್ಯವಿರಬೇಕು ಎಂಬ ಶಂಕೆ ಮೂಡಿತ್ತು. ಆದರೆ ಇದೀಗ ಕಬ್ಬಿನ ವಾಹನ ಡಿಕ್ಕಿಯಾಗಿ ಧ್ವಜ ಕಂಭಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಚೆನ್ನಮ್ಮನ ಪ್ರತಿಮೆ ಬಳಿಯಿರುವ ಕನ್ನಡ ಧ್ವಜ ಕಂಬ ರಾತ್ರಿ ಬೆಳಗಾಗುವಷ್ಟರಲ್ಲಿ ಕಿರಿದಾಗಿದ್ದು, ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಕಿಡಿಗೇಡಿಗಳು ಕಂಭವನ್ನು ಕತ್ತರಿಸಿ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಇದೀಗ ಗೊಂದಲಗಳಿಗೆ ತೆರೆಬಿದ್ದಿದ್ದು, ಕಬ್ಬಿನ ಲಾರಿ ತಗುಲಿ ಹಾನಿಯಾಗಿದೆ ಎಂದು ತಿಳಿದುಬಂದಿದೆ.
Laxmi News 24×7