ಮಾನ್ಯ ಸಂಸದರಾದ ಶ್ರೀನಿವಾಸ್ ಪ್ರಸಾದ್ ಅವರಿಗೆ ಅತ್ಯಂತ ಗೌರವಪೂರ್ವಕವಾಗಿ ನೀಡಿದ ಪ್ರತಿಕ್ರಿಯೆಗೆ ಎದುರಾಗಿ ಶ್ರೀನಿವಾಸ್ ಪ್ರಸಾದ್ ಅವರು ಅತ್ಯಂತ ಕೀಳು ಮಟ್ಟದಲ್ಲಿ ಪ್ರತಿಕ್ರಿಯಿಸಿದ್ದು ನನ್ನನ್ನು ಸಿದ್ದರಾಮಯ್ಯನವರ ಚೇಲಾ ಎಂದು ಕರೆದಿದ್ದು ಒಂದು ಜಿಲ್ಲಾ ಪಂಚಾಯತ್ ಸ್ಥಾನವನ್ನೂ ಸಹ ಗೆಲ್ಲಲಾಗದವ ಎಂಬ ಮಾತನ್ನು ಆಡಿರುತ್ತಾರೆ.
ಸ್ನೇಹದ ಮಹತ್ವದ ವ್ಯತ್ಯಾಸ ಗೊತ್ತಿಲ್ಲದೇ ಚೇಲಾ ಎಂಬ ಪದವನ್ನು :ಬಳಸಿರುವ ಸಂಸದರು ತಮ್ಮ ಸ್ಥಾನದ ಘನತೆಯನ್ನು ಅರಿತು ಮಾತನಾಡಬೇಕು. ಇಲ್ಲವಾದರೆ ಮುತ್ಸದ್ಧಿತನಕ್ಕೂ ಅವಿವೇಕತನಕ್ಕೂ ಅಂತಹ ವ್ಯತ್ಯಾಸ ಇರಲಾರದು ಎಂದು ನಾನು ಭಾವಿಸುತ್ತೇನೆ.
ಇನ್ನು ನಿನ್ನೆಯಷ್ಟೇ ಮಹದೇವಪ್ಪನವರು ನನ್ನನ್ನು ನಂಜನಗೂಡು ಉಪ ಚುನಾವಣೆಯಲ್ಲಿ ಸೋಲಿಸಲು ಕಾರಣರಾದರು ಎಂಬ ಮಾತನ್ನು ಹೇಳಿದ್ದ ಪ್ರಸಾದ್ ಅವರು ಈ ದಿನ ನಾನು ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಗೆಲ್ಲಲಾರದವ ಎನ್ನುತ್ತಿದ್ದಾರೆ. ಅಧಿಕಾರ ಇಲ್ಲವೆಂದಾಕ್ಷಣ ವ್ಯಕ್ತಿಯ ಘನತೆ ಅಥವಾ ಜನರ ಪ್ರೀತಿ ಕಡಿಮೆಯಾಗುತ್ತದೆಯೇ ಅಥವಾ ಮಾಡಿದ ಕೆಲಸ ಕಾರ್ಯಗಳ ಬೆಲೆ ಕಳೆದು ಹೋಗುತ್ತದೆಯೇ?
ಅವರೇ ಹೇಳಿರುವ ಈ ಎರಡು ಮಾತುಗಳಲ್ಲಿ ಯಾವ ಮಾತು ಸತ್ಯ ಎಂಬುದನ್ನು ಅವರು ಹೇಳಬೇಕು.
ಜೊತೆಗೆ ದೇಶದಲ್ಲಿ ನಡೆಯುತ್ತಿರುವ ಎಲ್ಲ ಜನ ವಿರೋಧಿ ನೀತಿಗಳನ್ನು ಕಂಡು ಮೌನವಾಗಿರುವ ಶ್ರೀನಿವಾಸ್ ಪ್ರಸಾದ್ ಅವರು ನೈಜ issue ಗಳನ್ನು ಬದಿಗೊತ್ತಿ ಇದೀಗ ಕೀಳು ಮಟ್ಟದಲ್ಲಿ ವ್ಯಕ್ತಿಗತವಾದ ದಾಳಿಗೆ ಇಳಿದಿರುವುದು ಅವರ ಮಟ್ಟವನ್ನು ತೋರುತ್ತಿದೆ.
ಪ್ರಸಾದ್ ಅವರ ಈ ಘನತೆ ರಹಿತವಾದ ಮಾತುಗಳಿಗೆ ನಮ್ಮ ಭಾಗದ ಪ್ರಜ್ಞಾವಂತ ಜನರೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಿ
ಎಂದು ಅಪೇಕ್ಷಿಸುತ್ತೇನೆ.