Breaking News

ಕಳೆದ 14 ಗಂಟೆಗಳಿಂದ 270 ಕಿಲೋ ಮೀಟರ್ ಉದ್ಧಕ್ಕೂ ಸಾಲು ಗಟ್ಟಿನಿಂತಿದ್ದ ಸಂಚಾರ ದಟ್ಟಣೆ

Spread the love

ಜಮ್ಮು, ಡಿ.20- ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ಧಾರಿಯಲ್ಲಿ ಕಳೆದ 14 ಗಂಟೆಗಳಿಂದ 270 ಕಿಲೋ ಮೀಟರ್ ಉದ್ಧಕ್ಕೂ ಸಾಲು ಗಟ್ಟಿನಿಂತಿದ್ದ ಸಂಚಾರ ದಟ್ಟಣೆಯಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ತೆರವುಗೊಳಿಸಲಾಗಿದೆ.

ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ರಂಬಾನ್ ಜಿಲ್ಲೆಯ ಚಂದರ್‍ಕೋಟೆ ಬಳಿಯ ಭೂಂ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿತ್ತು. ಸುಮಾರು 2 ಸಾವಿರ ವಾಹನಗಳು ಭೂ ಕುಸಿತದಿಂದ ಮುಂದೆ ಸಾಗಲಾಗದೆ ರಸ್ತೆಯಲ್ಲಿ ನಿಲ್ಲಬೇಕಾಯಿತು. ಇದರಿಂದ ಜಮ್ಮು ಕಾಶ್ಮೀರ ಹೆದ್ಧಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಕ್ಷಣವೇ ರಸ್ತೆ ನಿರ್ವಹಣೆ ಮಾಡುವ ಸಂಸ್ಥೆಯವರು ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆಗೆ ಇಳಿದಿತ್ತು. ರಾತ್ರಿಯಿಡಿ ನಡೆದ ಕಾರ್ಯಚರಣೆಯಿಂದಾಗಿ ಕೊನೆಗೂ ಭೂ ಕುಸಿತದ ಅವಶೇಷಗಳನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಹೆದ್ಧಾರಿಯನ್ನು ತೆರವುಗೊಳಿಸಲಾಗಿದ್ದು, ಸಂಚಾರ ವ್ಯವಸ್ಥೆ ಮತ್ತೆ ಆರಂಭವಾಗಿದೆ.

ಸುಮಾರು 270 ಕಿಲೋ ಮೀಟರ್ ರಸ್ತೆಯುದ್ಧಕ್ಕೂ ಸಾಲುಗಟ್ಟಿ ನಿಂತಿದ್ದ ವಾಹನಗಳಲ್ಲಿ ಪ್ರಯಾಣಿಕರು ಕೊರೆಯುವ ಚಳಿಯಲ್ಲಿ ರಾತ್ರಿ ಕಳೆದಿದ್ದರು. ಭೂ ಕುಸಿತದಿಂದಾಗಿ ಲಘು ವಾಹನಗಳನ್ನು ಪರ್ಯಾಯ ರಸ್ತೆಯ ಮೂಲಕ ಕಳುಹಿಸುವ ಪ್ರಯತ್ನ ನಡೆದಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ