ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ದಂಪತಿಗೆ ಗಂಡು ಮಗುವಿನ ಜನನವಾಗಿದೆ
ವಿಶೇಷ ಅಂದ್ರೆ ಇಂದು ಪವನ್ ಒಡೆಯರ್ ಅವರ ಹುಟ್ಟುಹಬ್ಬವಾಗಿದೆ. ಹೀಗಾಗಿ ಇಂದೇ ಮಗನ ಜನನ ಕೂಡ ಆಗಿರುವುದು ಕುಟುಂಬದ ಸಂತಸ ಮತ್ತಷ್ಟು ಹೆಚ್ಚಿಸಿದೆ. ಈ ಖುಷಿಯ ವಿಚಾರವನ್ನು ಪವನ್ ಒಡೆಯರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಪತ್ನಿ ಹಾಗೂ ಮಗು ಆಸ್ಪತ್ರೆಯಲ್ಲಿರುವ ಫೋಟೋವನ್ನು ಪವನ್ ತಮ್ಮ ಇನ್‍ಸ್ಟಾ, ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ನನ್ನ ಜನ್ಮದಿನದಂದೇ ವಿಶ್ವದ ಅತ್ಯಂತ ಅದ್ಭುತ ಉಡುಗೊರೆ ದೊರೆತಿದ್ದು, ಗಂಡು ಮಗುವಿನ ಜನನವಾಗಿದೆ. ಜೈ ಚಾಮುಂಡೇಶ್ವರಿ ಎಂದು ಬರೆದುಕೊಂಡಿದ್ದಾರೆ.
ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಅವರು 2018ರ ಮೇ 20ರಂದು ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಮೂಲದವರಾಗಿದ್ದು, ಕನ್ನಡದ ಕಿರುತೆರೆ ನಟಿಯಾಗಿ ಅಭಿನಯಿಸಿದ್ದಾರೆ.

ಮೊದಲ ಮಗುವಿನ ಸಂತಸದಲ್ಲಿದ್ದ ದಂಪತಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದರು. ಅಲ್ಲದೇ ಅಪೇಕ್ಷಾ ಪುರೋಹಿತ್ ಗರ್ಭಿಣಿ ಫೋಟೋಶೂಟ್ ಕೂಡ ಮಾಡಿಸಿದ್ದರು. ಪತ್ನಿಯ ಜೊತೆ ಪವನ್ ಒಡೆಯರ್ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದರು. ವಿವಿಧ ರೀತಿಯಲ್ಲಿ ದಂಪತಿ ಫೋಟೋಶೂಟ್ ಮಾಡಿದ್ದು, ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದರು.
ಈ ಫೋಟೋವನ್ನು ಪವನ್ ಅವರು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದು, ‘ಸದಾ ವಟ ವಟ ಮಾತನಾಡುವ ನಾನು. ಮೌನಿಯಾದ ಕ್ಷಣಗಳು. ಹೌದು. ನಮ್ಮ ಜೀವನದ ಅತ್ಯಂತ ಸುಂದರ ದಿನಗಳಿಗಾಗಿ ಹಾತೊರೆಯುತ್ತಿದ್ದೇವೆ. ಮಾತುಗಳಲ್ಲಿ ಆ ಖುಷಿ ಹೇಳಲಾಗದೆ. ಹಾಡಿನ ರೂಪದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೇವೆ. ಆ ಮುಗುಳುನಗೆ ಹಾಡಿಗಾಗಿ ನಿರೀಕ್ಷಿಸಿ’ ಎಂದು ಬರೆದುಕೊಂಡಿದ್ದರು. ಇದೀಗ ದಂಪತಿಗೆ ಗಂಡು ಮಗು ಹುಟ್ಟಿದ್ದು, ಕುಟುಂಬ ಸಂಸತದಲ್ಲಿದೆ.
Laxmi News 24×7