Breaking News
Home / Uncategorized / ಭಾರತ್ ಬಂದ್‌ಗೆ ಸೈನಿಕನ ಬೆಂಬಲ

ಭಾರತ್ ಬಂದ್‌ಗೆ ಸೈನಿಕನ ಬೆಂಬಲ

Spread the love

ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್‌ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಂದ್ ಬಹುತೇಕ ಯಶ್ವಸಿಯಾಗಿದೆ.

ಚೆನ್ನಮ್ಮ ಸರ್ಕಲ್ ಬಳಿ ಮುಂಜಾನೆ ಹೋರಾಟಗಾರರು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ರೈತ ಮುಖಂಡರು ಹೊಸೂರು ಡಿಪೋ ಮುಂದೆ ಸಾರಿಗೆ ಬಸ್ ಗಳು ಹೊರಹೋಗದಂತೆ ತಡೆದು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಬಲವಂತವಾಗಿ ಬಂದ್ ಮಾಡಿದಂತೆ ಪೊಲೀಸರು ಎಚ್ಚರಿಕೆ ನೀಡಿದ ಪರಿಣಾಮ ಹೋರಾಟಗಾರರು ಹಾಗೂ ಪೊಲೀಸರ ಮಧ್ಯೆ ಕೆಲಕಾಲ‌ ಮಾತಿನ ಚಕಮಕಿ‌ ನಡೆಯಿತು.

ಸೈನಿಕನ ಬೆಂಬಲ
ಚೆನ್ನಮ್ಮ‌ ಸರ್ಕಲ್ ಬಳಿ ಕಾಂಗ್ರೆಸ್‌ನ ಕಿಸಾನ್‌ ಮೋರ್ಚಾ ಕಾರ್ಯಕರ್ತರು ಹಾಗೂ ರೈತ ಮುಖಂಡರು ನಡೆಸುತ್ತಿದ್ದ ಪ್ರತಿಭಟನೆಗೆ ರಜೆ ಮೇಲೆ ಊರಿಗೆ ಆಗಮಿಸಿದ್ದ ಸೈನಿಕರೊಬ್ಬರು ಸಮವಸ್ತ್ರದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸದ್ಯ ಅಸ್ಸಾಂ ಸಿಗ್ನಲ್‌ ರೆಜಿಮೆಂಟ್ ನಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಕುಂದಗೋಳ ತಾಲೂಕಿನ ಬರದ್ವಾಡ್ ಗ್ರಾಮದ ರಮೇಶ್‌ ಮಾಡಳ್ಳಿ 25 ದಿನಗಳ ಕಾಲ ರಜೆಯಲ್ಲಿ ಊರಿಗೆ ಬಂದಿದ್ದು ಪ್ರತಿಭಟನೆಯನ್ನು ಭಾಗವಹಿಸಿದ್ದಾರೆ.

ಈ ವೇಳೆ ಮಾತನಾಡಿದ ಸೈನಿಕ ರಮೇಶ್ ನಾನು ರೈತನ ಮಗ. ಹೀಗಾಗಿ ರೈತರ ಹೋರಾಟಕ್ಕೆ ಬೆಂಬಲ‌ ನೀಡುತ್ತಿದ್ದೇನೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನುಗಳು ರೈತರಿಗೆ ಮಾರಕವಾಗಿ ಎಂದರು.

ಇನ್ನೂ ರಜೆ ಆಗಮಿಸಿದ ಸೈನಿಕ ರೈತರ ಪ್ರತಿಭಟನೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಪೊಲೀಸರು ರಮೇಶ್‌ ಅವರಿಂದ ಮಾಹಿತಿ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ತನ್ನ ಸೇವಾ ಅವಧಿ ಜನವರಿಯಲ್ಲಿ ಕೊನೆಯಾಗಲಿದ್ದು, ಸೇವೆ ವಿಸ್ತರಿಸಲು ನಾನು ಅರ್ಜಿ ಹಾಕಿದ್ದೇನೆ ಎಂದು ರಮೇಶ್‌ ತಿಳಿಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್ ಅವರಂತಹ ಸಿಎಂ ಬೇಕಿದೆ: ನೇಹಾ ಹಿರೇಮಠ್ ತಂದೆ ಹೇಳಿಕೆ

Spread the love ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಳೆದ ತಿಂಗಳು ನೇಹಾ ಪಾಟೀಲ್ ಕೊಲೆ ಕೇಸ್ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ