ಬೆಳಗಾವಿ-/ಕೇಂದ್ರ ಸರ್ಕಾರದ ಕೃಷಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಭಾರತ್ ಬಂದ್ ಕರೆ ನೀಡಿದ್ದು, ಬೆಳಗಾವಿಯಲ್ಲಿ ಬೆಳಗಿನ ಜಾವವೇ ಪ್ರತಿಭಟನೆ ಶುರುವಾಗಿದೆ.
ಬೆಳಗಾವಿ ಬಸ್ ನಿಲ್ದಾಣ ಎದುರು ರೈತ ಮುಖಂಡರ ವಿನೂತನವಾಗಿ ಧರಣಿ ಮಾಡುತ್ತಿದ್ದಾರೆ. ಒಲೆ ಸಿದ್ಧಪಡಿಸಿ ಚಹಾ ತಯಾರಿಸಿ ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದು, ಚಾಯ್ವಾಲಾ ಮೋದಿಗೆ ಧಿಕ್ಕಾರ ಧಿಕ್ಕಾರ ಎಂದು ಘೋಷಣೆ ಕೂಗುತ್ತಿದ್ದಾರೆ. ಟೀ ಪೌಡರ್, ಹಾಲು ತಂದು ಚಹಾ ತಯಾರಿಸಿದ ರೈತ ಮಹಿಳೆ ಜಯಶ್ರೀ, ಶುಗರ್ ಲೆಸ್ ಟೀ ರೆಡಿ ಮಾಡಿ ಪ್ರಧಾನಿ ಮೋದಿಗೆ ಕೊಡ್ತೀವಿ ಎಂದು ರೈತ ಮಹಿಳೆ ಜಯಶ್ರೀ ಕೂಗುತ್ತ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಕೇಂದ್ರ ಸರ್ಕಾರ ನೂತನ ಕೃಷಿಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ಭಾರತ್ ಬಂದ್ ನಡೆಯುತ್ತಿದೆ. ಭಾರತ್ ಬಂದ್ ಬೆಂಬಲಿಸಿ ಬೆಳಗಾವಿ ಬಸ್ ನಿಲ್ದಾಣ ಎದುರು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.
ಧರಣಿನಿರತ ರೈತ ಮುಖಂಡರು ತಯಾರಿಸುತ್ತಿದ್ದ ಚಹಾ ಪಾತ್ರೆಯನ್ನು ಪೊಲೀಸರು ಕಸಿದುಕೊಂಡಿದ್ದಾರೆ. ಈ ಸಂಧರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾ ನಿರತರ ಮಧ್ಯೆ ತೀವ್ರ ವಾಗ್ವಾದ ನಡೆದಿದ್ದು,ಬೆಳಗಾವಿ,ಬಸ್ ನಿಲ್ದಾಣ ಎದುರು ಮುಂದುವರೆದ ರೈತಪರ, ಕನ್ನಡಪರ ಸಂಘಟನೆಗಳ ಧರಣಿ ಮುಂದುವರೆದಿದೆ
Laxmi News 24×7