ಬೆಳಗಾವಿ- ಕೇಂದ್ರ ಸರ್ಕಾರದ ರೈತ ವಿರೋಧ ನಿಲುವು ಖಂಡಿಸಿ ರೈತ ಸಂಘಟನೆಗಳು ನಾಳೆ ಭಾರತ್ ಬಂದ ಕರೆ ನೀಡಿರುವ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ 30ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು ಸಭೆ ನಡೆಸಿದರು.
ಬೆಳಗಾವಿ ಡಾ. ಬಿ ಆರ್ ಅಂಬೇಡ್ಕರ್ ಗಾರ್ಡನ್ ನಲ್ಲಿ ಸಭೆ ನಡೆಸಿದ ರೈತ ಮುಖಂಡರು, ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನೆ ನಡೆಸಲು ನಿರ್ಧರಿಸಿದರು.
ರೈತ ಸಂಘಟನೆ, ಕಾರ್ಮಕ ಸಂಘಟನೆ, ಕನ್ನಡ ಪರ ಸಂಘಟನೆ, ಆಟೋ ಚಾಲಕರ ಸಂಘಟನೆ ಬೆಂಬಲ ಸೂಚಿಸಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು.
Laxmi News 24×7