ಬಳ್ಳಾರಿ : ವಿಜಯನಗರ ಜಿಲ್ಲೆಯ ರಚನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಹೋರಾಟಗಾರರು ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವ ಆನಂದ ಸಿಂಗ್ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ವೈಯಕ್ತಿಕ ಹಿತಾಸಕ್ತಿಗಾಗಿ ಸಚಿವ ಆನಂದ ಸಿಂಗ್ ಜಿಲ್ಲೆಯನ್ನು ವಿಭಜಿಸುತ್ತಿದ್ದಾರೆ. ಅವರ ಬಳ್ಳಾರಿಗೆ ಬಂದರೆ ಮುತ್ತಿಗೆ ಹಾಕುತ್ತೇವೆಂದು ಪ್ರತಿಭಟನಾಕಾರರು ಹೇಳಿದ್ದರು. ಅದೇ ರೀತಿ ಇಂದು ಸ್ವರಾಜ್ಯ ಕಾರ್ಯಕ್ರಮಕ್ಕೆ ಜಿಲ್ಲೆಗೆ ಆಗಮಿಸಿದ ಸಚಿವ ಹಾಗೂ ಡಿಸಿಎಂ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದ್ದರು.
ಮೊದಲೇ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿತ್ತು. ಪೊಲೀಸರ ಭದ್ರತೆಯ ನಡುವೆಯೂ ಪ್ರತಿಭಟನೆ ನಡೆಸಿದರು. ಕಪ್ಪು ಬಾವುಟ ತೋರಿಸಲು ಮುಂದಾದರು. ಬಳಿಕ ದುರ್ಗಮ್ಮ ದೇವಿ ದರ್ಶನಕ್ಕೆ ಬಂದ ನಾಯಕರ ಮೇಲೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.