Breaking News

ಇವಿಎಂ ಬಳಕೆ ಕೈಬಿಟ್ಟು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ:ಇವಿಎಂ ವಿರುದ್ಧ ವಕೀಲ ಸಿ.ಆರ್. ಜಯ ಸುಕಿನ್

Spread the love

ನವದೆಹಲಿ: ಚುನಾವಣೆಗಳಲ್ಲಿ ಇವಿಎಂ ಬಳಕೆ ಕೈಬಿಟ್ಟು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಇವಿಎಂ ವಿರುದ್ಧ ವಕೀಲ ಸಿ.ಆರ್. ಜಯ ಸುಕಿನ್ ಎಂಬವವರು ಅರ್ಜಿ ಸಲ್ಲಿಸಿದ್ದಾರೆ.

ಬಿಜೆಪಿಯು ಉಪ ಚುನಾವಣೆ ಸೇರಿದಂತೆ ಬಿಹಾರ ವಿಧಾನಸಭಾ ಚುನಾವಣೆ ಎಲ್ಲೆಡೆಯೂ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಇದೀಗ ಎಲೆಕ್ಟ್ರಾನಿಕ್ ಮತ ಯಂತ್ರ (ಇವಿಎಂ) ಸರಿಯಾಗಿಲ್ಲ ಎಂಬ ಗಲಾಟೆ ಶುರುವಾಗಿದೆ. ಇದು ಪ್ರತಿ ಚುನಾವಣೆಯಲ್ಲಿ ನಡೆಯುತ್ತಿರುವ ವಿಷಯವೇ. ಆದರೆ ಇದೇ ವಿಷಯವೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಅರ್ಜಿಯಲ್ಲಿ ಅವರು ಹೇಳಿರುವುದು ಏನೆಂದರೆ, ಚುನಾವಣೆಗಳಲ್ಲಿ ಇವಿಎಂ ಬಳಕೆ ಕೈಬಿಟ್ಟು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅವರು ಕೋರಿದ್ದಾರೆ. ಇವಿಎಂಗಳು ದೋಷಪೂರಿತವಾಗಿವೆ. ಅವುಗಳನ್ನು ತಿರುಚುವ ಸಾಧ್ಯತೆ ಹೆಚ್ಚಿದೆ. ಆ ಹಿನ್ನೆಲೆಯಲ್ಲಿಯೇ ಜಗತ್ತಿನ ವಿವಿಧ ರಾಷ್ಟ್ರಗಳು ಅವುಗಳ ಬಳಕೆಯನ್ನು ಕೈಬಿಟ್ಟಿವೆ. ಆದ್ದರಿಂದ ಭಾರತದಲ್ಲಿ ಕೂಡ ಇವಿಎಂ ಬಳಕೆ ಕೈಬಿಡಲು ನಿರ್ದೇಶಿಸಬೇಕು ಎಂದು ಅವರು ಕೋರಿದ್ದಾರೆ.

ಭಾರತದಲ್ಲಿ ಸಾಂಪ್ರದಾಯಿಕ ಮತಪತ್ರ ಬಳಕೆ ಜಾರಿಗೆ ಬಂದರೆ ಮತಗಳನ್ನು ತಿರುಚುವ ಮತ್ತು ದುರುಪಯೋಗಪಡಿಸಿಕೊಳ್ಳುವ ಅಪಾಯಕಾರಿ ಪ್ರವೃತ್ತಿಗೆ ಕಡಿವಾಣ ಹಾಕಿದಂತಾಗುತ್ತದೆ. ಪ್ರಜಾಪ್ರಭುತ್ವದ ಮೂಲ ಪ್ರಕ್ರಿಯೆಯಾದ ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯಲು ಮತಪತ್ರಗಳೇ ವಿಶ್ವಾಸಾರ್ಹ ಮಾನದಂಡಗಳು ಎಂದು ಅರ್ಜಿಯಲ್ಲಿ ವಕೀಲರು ತಿಳಿಸಿದ್ದಾರೆ.

ಇವಿಎಂಗಳನ್ನು ಅವುಗಳ ತಯಾರಿಕೆಯ ಹಂತದಲ್ಲೆ ತಂತ್ರಾಂಶ ಹ್ಯಾಕ್ ಅವಕಾಶವಿದೆ. ಹಾಗಾಗಿ ಯಾವುದೇ ಹ್ಯಾಕರ್ ಅಥವಾ ಮಾಲ್‍ವೇರ್ ನೆರವು ಅಗತ್ಯವೂ ಇಲ್ಲದೆ ಫಲಿತಾಂಶ ತಿರುಚಬಹುದು. ಈವರೆಗೆ ಜಗತ್ತಿನಲ್ಲಿ ಹೀಗೆ ಹ್ಯಾಕ್ ಮಾಡಲು ಸಾಧ್ಯವಿಲ್ಲದ ಇವಿಎಂ ಯಂತ್ರಗಳೇ ಇಲ್ಲ ಎಂದು ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ