ಹುಬ್ಬಳ್ಳಿ: ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಮೂವರು ಐನಾತಿ ಮನೆಗಳ್ಳರನ್ನು ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸರು ಬಂಧಿಸಿದ್ದಾರೆ.ಪ್ರೇಮ್‍ಕುಮಾರ್ ಭೀಮಪ್ಪ ಪೂಜಾರ, ವಿರೇಶ ಜಂಬುನಾಥ ಕಾಂಬಳೆ, ರಾಘವೇಂದ್ರ ಮಲ್ಲಪ್ಪ ಸಲಗಾರ ಬಂಧಿತ ಆರೋಪಿಗಳು. ಬಂಧಿತರಿಂದ ದ್ವಿಚಕ್ರ ವಾಹನ, ಲ್ಯಾಪ್‍ಟಾಪ್, ಟಿವಿ ಹಾಗೂ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
